ಬಿಬಿಎಂಪಿ | 'ಬ್ಲಾಕ್‌ ಸ್ಟಾಟ್‌'ಗಳಲ್ಲಿ ರಾತ್ರಿ ಕಾರ್ಯಾಚರಣೆಗಿಳಿದ ಮಾರ್ಷಲ್‌ಗಳು!

  • ಕಸ ಹಾಕುವವರನ್ನು ಹಿಡಿದು ದಂಡ ವಸೂಲಿ
  • ಎಲ್ಲರಿಗೂ ಒಂದೇ ರೀತಿಯ ದಂಡ ವಿಧಿಸುವುದಿಲ್ಲ

ಬೆಂಗಳೂರಿನಲ್ಲಿ ಕಸ ನಿರ್ವಹಣೆ ಇನ್ನೂ ಬಗೆಹರಿಯದ ವಿಷಯವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಬ್ಲಾಕ್‌ ಸ್ಟಾಟ್‌'ಗಳಲ್ಲಿ ಕಸ ಹಾಕುವವರಿಗೆ ಎಷ್ಟೇ ದಂಡ ವಿಧಿಸಿದರೂ ಕೂಡಾ ಕಸ ಹಾಕುವುದನ್ನು ನಗರದ ಜನತೆ ನಿಲ್ಲಿಸುತ್ತಿಲ್ಲ.

ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ರಾತ್ರಿ 10:30ರ ಸುಮಾರಿಗೆ ಬಿಬಿಎಂಪಿ ಮಾರ್ಷಲ್‌ಗಳು ಕಸ ಹಾಕುವುವರಿಗೆ ದಂಡ ವಿಧಿಸುತ್ತಿದ್ದ ದೃಶ್ಯ ಕಂಡು ಬಂತು.

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಕಾರ್ಯನಿರತ ಬಿಬಿಎಂಪಿ ಮಾರ್ಷಲ್‌ವೊಬ್ಬರು, ’ರಾತ್ರಿ 10 ಗಂಟೆಯಿಂದ ಜನ ಪ್ಲಾಸ್ಟಿಕ್ ಕವರ್‌ಗಳನ್ನು ಹಿಡಿದುಕೊಂಡು ಕಸ ಹಾಕಲು ಬರುತ್ತಾರೆ. ಕೆಲವು ಜನ ಗಾಡಿಯಲ್ಲಿ ಬಂದು ಬಿಸಾಕಿ ಓಡಿ ಹೋಗುತ್ತಾರೆ. ನಾವು ಮರೆಯಲ್ಲಿ ನಿಂತು ಕಸ ಹಾಕುವವರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದೇವೆ. ಇಲ್ಲಿ ಈ ರೀತಿ ಮಾಡಬೇಡಿ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದು ಹೇಳುತ್ತೇವೆ. ಆದರೂ ಜನ ನಿಲ್ಲಿಸುತ್ತಿಲ್ಲ’ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬಾಗ್ಮನೆ ಟೆಕ್‌ಪಾರ್ಕ್‌ | ಲೋಕಾಯುಕ್ತ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.28ಕ್ಕೆ

‘ಎಲ್ಲರಿಗೂ ಒಂದೇ ರೀತಿಯ ದಂಡ ವಿಧಿಸುವುದಿಲ್ಲ. ಮಾಂಸಾಹಾರ ಹಾಗೂ ಪ್ಲಾಸ್ಟಿಕ್ ಕಸ ಹಾಕುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತಿದೆ’ ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್