
- ಕ್ಷೇತ್ರ- ವಾರ್ಡ್ ಬದಲಿಸಲು ಅಧಿಕೃತ ವೆಬ್ಸೈಟ್ನಲ್ಲಿ ನೊಂದಾಯಿಸಿ
- ಪಾಲಿಕೆಯ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರಿದ್ದಾರೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ರಾಜ್ಯ ಚುನಾವಣಾ ಆಯೋಗ, ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಿಸಿರುವ ಆಯೋಗ, ಪಾಲಿಕೆಯ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರಿದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1,433 ಇತರೆ ಮತದಾರರಿದ್ದಾರೆ ಎಂದು ಹೇಳಿದೆ.
243 ವಾರ್ಡ್ವಾರು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯನ್ನು ಪರಿಶೀಲಿಸಲು https://knowyourbooth.in/VoterSE ಲಿಂಕ್ ಕ್ಲಿಕ್ ಮಾಡಬಹುದು.
ಬಿಬಿಎಂಪಿ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಚುನಾವಣೆಗೆ ಸ್ಪರ್ಧಿಸಬೇಕಾದವರ ಹೆಸರು ಇಲ್ಲದಿದ್ದರೆ ಅಥವಾ ಕ್ಷೇತ್ರ ಅಥವಾ ವಾರ್ಡ್ ಅನ್ನು ಬದಲಾಯಿಸಬೇಕಾದರೆ ಅಧಿಕೃತ ವೆಬ್ಸೈಟ್ https://www.nvsp.in/ ನಲ್ಲಿ ನೋಂದಾಯಿಸಲು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
Final electoral roles published.
— Anjali S. (@anjali_WFR) October 3, 2022
Check your name on the rolls her https://t.co/DIsnywX3gc - if you are not included or need to shift constituency or ward pls use https://t.co/jGDnaHn2pu to register/shift asap. @ceo_karnataka @ECISVEEP @WFRising pic.twitter.com/WmjR4pgY1b
ಈ ಸುದ್ದಿ ಓದಿದ್ದೀರಾ?: ಬೆಂಗಳೂರು ಮಳೆ ಅವಾಂತರ| ಬಿಬಿಎಂಪಿಗೆ ₹350 ಕೋಟಿ ಪರಿಹಾರ ನಿಧಿ ಬಿಡುಗಡೆ ಮಾಡಿದ ಸರ್ಕಾರ
ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳ ಬಯಸುವವರು ಮೊಬೈಲ್ ಆಪ್ ವೋಟರ್ ಹೆಲ್ಪ್ಲೈನ್ (Voter Helpline) ಮತ್ತು ಎನ್ವಿಎಸ್ಪಿ ಪೋರ್ಟಲ್ (NVSP Portal)ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಸುತ್ತೋಲೆಯಲ್ಲಿ ತಿಳಿಸಿದೆ.