ಬೆಂಗಳೂರು | ಬಿಬಿಎಂಪಿ, ಬಿಎಂಆರ್‌ಸಿಎಲ್ ಅವೈಜ್ಞಾನಿಕ ಕಾಮಗಾರಿ; ಜನರ ಆಕ್ರೋಶ

  • 'ದಿನನಿತ್ಯದ ತಲೆನೋವಾಗಿ ಪರಿಣಮಿಸಿದ ರಸ್ತೆ ದುರಸ್ತಿ ಕಾಮಗಾರಿಗಳು'
  • 'ಮೆಟ್ರೋ' ಕಾಮಗಾರಿಗಾಗಿ ವೈಟ್ ಟಾಪಿಂಗ್ ರಸ್ತೆ ಅಗೆದ ಬಿಎಂಆರ್‌ಸಿಎಲ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಗರಬಾವಿ ಬಳಿ ವೈಟ್ ಟಾಪಿಂಗಾಗಿ ರಸ್ತೆ ಅಗೆದಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಯು ವಾಹನ ಸವಾರರಿಗೆ ಮೃತ್ಯುಕೂಪವಾಗಬಹುದು ಎಂದು ನಾಗರಿಕರು ಪಾಲಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ನಾಗರಬಾವಿ ಬಳಿ ₹17 ಕೋಟಿ ವೆಚ್ಚದಲ್ಲಿ 80 ಅಡಿ ರಸ್ತೆ ಕಾಮಗಾರಿ ಆರಂಭಿಸಿದ್ದು, ಅದಕ್ಕಾಗಿ ಆಳವಾಗಿ ‘ರಸ್ತೆ ಅಗೆದು ಕಾರ್ಯ ಪ್ರಗತಿಯಲ್ಲಿದೆ’ ಎಂದು ಬ್ಯಾರಿಕೇಡ್ ಹಾಕಿ ಕಳೆದ ಆರು ದಿನಗಳಿಂದ ಹಾಗೆ ಬಿಟ್ಟಿದ್ದಾರೆ.  

ಇದೀಗ, ಅದೇ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕಾಮಗಾರಿ ಆರಂಭಿಸಿದೆ. ಎರಡು ಸಂಸ್ಥೆಗಳ ಕಾಮಗಾರಿಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಬೆಂಗಳೂರು ನಿವಾಸಿ ಒಬ್ಬರು ಟ್ವೀಟ್ ಮಾಡಿದ್ದಾರೆ

ಮೂರನೇ ಹಂತದ ವೈಟ್ ಟಾಪಿಂಗ್ ಕಾಮಗಾರಿಗಾಗಿ ಆರಂಭಿಸಿ, ಪೂರ್ಣಗೊಳಿಸಿದ ನಂತರ ನಮ್ಮ ಮೆಟ್ರೋ ವಿಭಾಗವು ರಸ್ತೆ ಅಗೆದು, ಅವರ ಕಾಮಗಾರಿ ಮುಂದುವರೆಸುತ್ತಾರೆ ಎಂದು ಕುಮಾರ್‌ ಎಂಬುವವರು ಟ್ವೀಟ್ ಮಾಡಿದ್ದಾರೆ. 

AV Eye Hospital ad

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮತದಾರ ಪಟ್ಟಿಯಿಂದ 6 ಲಕ್ಷ ಹೆಸರುಗಳು ಡಿಲೀಟ್; ನಾಗರಿಕರ ಅನುಮಾನ

ಇದರಿಂದಾಗಿ, ಎಷ್ಟು ವಾಹನ ಸವರಾರು ಮೃತ ಪಡುತ್ತಾರೋ, ಅದೆಷ್ಟು ಹಣ ಬಳಸಿಕೊಳ್ಳುತ್ತಾರೋ, ಅದೆಷ್ಟು ಜನ ಇದರಿಂದ ನೋವು ಅನುಭವಿಸುತ್ತಾರೋ ತಿಳಿಯದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೋರಮಂಗಲದ 5ನೇ ಬ್ಲಾಕ್‌ನ ಒಂದನೇ ಅಡ್ಡ ರಸ್ತೆಯಲ್ಲಿ ಕಿ.ಮೀ ಗಟ್ಟಲೆ ರಸ್ತೆ ಹದಗೆಟ್ಟಿದೆ. ಸಂಪೂರ್ಣ ರಸ್ತೆ ಮರಳು, ಕಲ್ಲಿನಿಂದ ಕೂಡಿದೆ. ಹೀಗಾಗಿ ಈ ಕುರಿತು ಬಿಬಿಎಂಪಿ ಕ್ರಮ ಕೈಗೊಂಡು ಆದಷ್ಟು ಬೇಗ ನಗರದಲ್ಲಿರುವ ರಸ್ತೆ ಗುಂಡಿ ಮುಚ್ಚಿ, ವಾಹನ ಸವಾರರು ಮೃತ ಪಡುತ್ತಿರುವ ಸಂಖ್ಯೆ ಇಳಿಕೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ. 

ಗ್ರಾಫೈಟ್ ಜಂಕ್ಷನ್‌ನ ಆಸ್ಪತ್ರೆ ಬಳಿ ರಸ್ತೆ ಅಗೆಯಲಾಗಿದೆ. ರಸ್ತೆ ಅಗೆದು, ಬ್ಯಾರಿಕೇಡ್ ಅಳವಡಿಸಲಾಗಿದ್ದು, ನಿತ್ಯವೂ ಭಾರೀ ಸಂಚಾರ ದಟ್ಟಣೆಯಾಗುತ್ತಿದೆ. ಪ್ರತಿನಿತ್ಯ ಬಿಬಿಎಂಪಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಥವಾ ಬೆಂಗಳೂರು ವಿದ್ಯುತ್ ಸರಬರಾಜು (ಬೆಸ್ಕಾಂ) ಈ ಇಲಾಖೆಗಳು ಬಂದು ರಸ್ತೆ ಅಗೆಯುತ್ತಾರೆ. ರಸ್ತೆ ದುರಸ್ತಿ, ಬೆಂಗಳೂರಿನಲ್ಲಿ ದಿನನಿತ್ಯದ ತಲೆನೋವಾಗಿ ಪರಿಣಮಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app