ಬೆಂಗಳೂರು | ದೇವನಹಳ್ಳಿಯಲ್ಲಿ ನ.19-20ರಂದು ವಿಶೇಷ ತಳಿಯ ಶ್ವಾನಗಳ ದರ್ಶನ

ಪ್ರೆಸ್‌ಮೀಟ್‌
  • ದೇಶದ ಸೇನೆಯಲ್ಲಿ ಮನ್ನಣೆ ಪಡೆದಿವೆ 'ಮುಧೋಳ ಶ್ವಾನ'
  • ನ.20ರಂದು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಬಳಿಯ ʼಹೀರಾ ಫಾರ್ಮ್ಸ್‌ʼನಲ್ಲಿ ನ.19-20ರಂದು 'ಚಾಂಪಿಯನ್ ಶಿಪ್‌ ಡಾಗ್‌ ಶೋ' ನಡೆಯಲಿದೆ.

ಈ ಕುರಿತು ಬೆಂಗಳೂರು ಕೆನಾಲ್ ಕ್ಲಬ್‌ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, "ಬೆಂಗಳೂರು ಕೆನಾಲ್ ಕ್ಲಬ್‌ ಹಾಗೂ ಸಿಲಿಕಾನ್‌ಸಿಟಿ ಕೆನಾಲ್ ಕ್ಲಬ್‌ ಜಂಟಿಯಾಗಿ ಶ್ವಾನಗಳ ಪ್ರದರ್ಶನ ನಡೆಸುತ್ತಿವೆ. ಈ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌, ನೆದರ್ಲ್ಯಾಂಡ್‌ ಸೇರಿದಂತೆ ಹಲವು ದೇಶಗಳಿಂದ ಆಗಮಿಸುವ ತಜ್ಞರು ಸ್ಪರ್ಧೆಯ ತೀರ್ಪುಗಾರರಾಗಿ ಇರಲಿದ್ದಾರೆ" ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಬೆಂಗಳೂರು ಕೆನಾಲ್ ಕ್ಲಬ್‌ ಕಾರ್ಯದರ್ಶಿ ಸಂತೋಶ್ ಮಾತನಾಡಿ, "ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿ ರಕ್ಷಣಾ ತಂಡದಲ್ಲಿ ಬಳಸುವ ಜನಪ್ರಿಯ ಮುಧೋಳ ಶ್ವಾನ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ. ಸ್ವದೇಶಿ ಶ್ವಾನ ತಳಿಗಳನ್ನು ಗುರುತಿಸಿ, ಅವುಗಳನ್ನು ಸಾಕಾಣಿಕೆಗೆ ಪ್ರೇರೇಪಿಸುವುದು ಸ್ಪರ್ಧೆಯ ಉದ್ದೇಶ" ಎಂದರು.

ಬೆಂಗಳೂರು ಕೆನಾಲ್ ಕ್ಲಬ್‌ನ ಅಮೃತ್ ಹಿರಣ್ಯ ಮಾತನಾಡಿ, "ದೇಶಿ ತಳಿಗಳಾದ ಮುಧೋಳ್‌, ರಾಜಪಾಳ್ಯಂ, ಕಣ್ಣಿ, ಕೊಂಬಾಯ್‌ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಶ್ವಾನಗಳಲ್ಲಿ ಯಾವುದು ತನ್ನ ಮೂಲ ತಳಿಯೊಂದಿಗೆ ಹೆಚ್ಚು ಹೊಂದುತ್ತದೆಯೋ ಅದಕ್ಕೆ ಬಹುಮಾನ ನೀಡಲಾಗುತ್ತದೆ" ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಯಲ್ಲಿ ನಿಲ್ಲದ ಮೆಣಸಿನಕಾಯಿ ಕಳ್ಳತನ; ಹೊಲ ಕಾಯುವಲ್ಲಿ ನಿರತರಾದ ರೈತರು

"ಮಕ್ಕಳಲ್ಲಿ ಶ್ವಾನ ಪ್ರೀತಿ ಬೆಳೆಸಲು ನ.20ರಂದು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ, ಶ್ವಾನಗಳ ಕೂದಲು ಬಾಚುವುದು, ಉಗುರು ಸ್ವಚ್ಚಗೊಳಿಸುವುದು, ಆಹಾರ ಕೊಡುವ ಕ್ರಮ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳ ಕುರಿತು ಅರಿವು ಮೂಡಿಸಲಾಗುತ್ತದೆ" ಎಂದು ಹೇಳಿದರು.

ನಾಯಿಗಳ ಪ್ರದರ್ಶನ

ಮುಧೋಳದಿಂದ ಬಂದಿದ್ದ ಶ್ವಾನ ತಳಿಗಳ ಸಾಕಾಣಿಕೆದಾರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app