ಬೆಂಗಳೂರು: 'ನಮ್ಮ ಮೆಟ್ರೋ' ಬಳಿ ಮೂರು ಚಕ್ರಗಳ ವಿಶಿಷ್ಟ ವಾಹನ ಪ್ರದರ್ಶನ; ಮುಂದಿನ ದಿನಗಳಲ್ಲಿ ಜನರ ಬಳಕೆಗೆ ಲಭ್ಯ

  • ಗುಜುರಿಗೆ ಸೇರಿದ ವಾಹನಗಳಿಂದ ರೂಪಿಸಲಾದ ವಿಶಿಷ್ಟ ವಾಹನ 
  • 2030ರ ವೇಳೆಗೆ 50 ಕೋಟಿ ಜನರಿಗೆ ಬಳಕೆಗೆ ಲಭ್ಯವಾಗುವ ವೆಹಿಕಲ್  

ಸೌರಶಕ್ತಿಯ ನೆರವಿನಿಂದ ಚಲಾಯಿಸಬಹುದಾದ ಮೂರು ಚಕ್ರದ ಎಲೆಕ್ಟ್ರಿಕ್ ವಾಹನವೊಂದನ್ನು ಬೆಂಗಳೂರಿನ ಚರ್ಚ್ ಸ್ಟ್ರೀಟ್ 'ನಮ್ಮ ಮೆಟ್ರೋ' ಬಳಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಕುರಿತು ಹಲವರು ಸಂತಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಏಕಕಾಲಕ್ಕೆ ಒಂದು ಕಲಾಕೃತಿಯಂತೆ, ಒಂದು ವಿಶೇಷ ವಾಹನದಂತೆ ಇದು ಕಂಗೊಳಿಸುತ್ತಿದೆ.

ಮೂರು ಚಕ್ರಗಳನ್ನು ಒಳಗೊಂಡ ವಿಶೇಷ ವಾಹನವನ್ನು ಅನೇಕರು ಅಚ್ಚರಿ ಮತ್ತು ಸಂತಸದೊಂದಿಗೆ ಸಂದರ್ಶಿಸುತ್ತಿದ್ದಾರೆ.

Eedina App

ವಾಹನ ಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆ ಏನೆಂದರೆ, ಇದನ್ನು ಬಳಸಿ ಎಸೆದ ವಸ್ತುಗಳಿಂದ ಮಾಡಲಾಗಿದೆ. ನಗರದ ಐಟಿ ಕಂಪನಿಗಳ ಕೆಲವು ಉದ್ಯೋಗಿಗಳು 'ಬೆಂಗಳೂರು ಮೂವಿಂಗ್' ಎಂಬ ಈ ವಾಹನ ರೂಪಿಸಿದ್ದಾರೆ. 

ಈ ಎಲೆಕ್ಟ್ರಿಕ್ ವಾಹನ ನಿಲ್ಲಿಸಲಾಗಿರುವ ಪ್ರದೇಶದ ಸುತ್ತಲಿನ ಜಾಗವನ್ನು ತ್ಯಾಜ್ಯ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಸರಸ್ನೇಹಿ ಯೋಜನೆಯಾಗಿದೆ. ಇದನ್ನು ಮುಂಬೈ ಮೂಲದವರಾದ ರಾಧಿಕ ಮತ್ತು ಬೆಂಗಳೂರಿನ ರಾಹುಲ್ ಎಂಬುವವರು ರೂಪಿಸಿದ್ದಾರೆ. 

AV Eye Hospital ad

ವಿಶೇಷವೆಂದರೆ, ಈ ವಾಹನವನ್ನು  ಶನಿವಾರ ಮತ್ತು ಭಾನುವಾರ ಮಾತ್ರ ಉಪಯೋಗಿಸಿಕೊಳ್ಳಬಹುದು. ಇದಕ್ಕೆ ಸೋಲಾರ್ ಪ್ಯಾನಲ್ ಅನ್ನು ಅಳವಡಿಸಲಾಗಿದೆ. ಈ ಸೈಕಲ್ ಅನ್ನು ಹಳೆಯ ಗುಜರಿಗೆ ಸೇರಿದ ವಾಹನಗಳ ಉಪಕರಣ ಸೇರಿದಂತೆ ಇನ್ನಿತರ ಬಳಕೆಯಾದ ವಾಹನದ ವಸ್ತುಗಳನ್ನು ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಮೆಟ್ರೋ | ವಾಟ್ಸ್ಆ್ಯಪ್ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಬಳಕೆ; ಉತ್ತಮ ಸ್ಪಂದನೆ

ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 2030ರ ವೇಳೆಗೆ 50 ಕೋಟಿ ಜನರು ಇಂಥ ವಾಹನದ ಸೌಲಭ್ಯವನ್ನು ಪಡೆಯಬಹುದು. ಓಲಾ ಉಬರ್ ರ್‍ಯಾಪಿಡೋ ಆ್ಯಪ್ ಆಧಾರಿತ ಕಂಪನಿಗಳ ಸೇವೆಯಂತೆ ಇದನ್ನೂ ಕೂಡ ಬಳಸಬಹುದು. 

Under Bengaluru Moving initiative, a 3-wheeler installation has been created to nudge people to think about the journey of their delivery packages.This provides an interactive experience that encourages audiences to touch & feel an EV in real-time #EVmyDeliveryinitiative #BLR pic.twitter.com/6wHIYHVsov

ಆಟೋ ಗುರು, ಬೆಂಗಳೂರು ಡಿಸೈನ್ ವೀಕ್, ಈವೆಂಟ್ ಆಟೋಮೋಟಿವ್ ಉದ್ಯಮ, ಇ-ಕಾಮರ್ಸ್, ಸ್ಟಾರ್ಟ್-ಅಪ್‌ಗಳು ಹಾಗೂ ವಿನ್ಯಾಸ ಸ್ಟುಡಿಯೊ ಇನ್ನೂ ಹಲವು ಪಾಲುದಾರರು ಸೇರಿ ಪರಿಸರಸ್ನೇಹಿ ಸೌರಶಕ್ತಿ ನೆರವಿನಿಂದ ಚಲಿಸುವ ವಾಹನ ನಿರ್ಮಾಣ ಮಾಡಲು ಸಹಕರಿಸಿದ್ದಾರೆ ಎನ್ನಲಾಗಿದೆ. ಅವರೆಲ್ಲರೂ ಇದರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸಜ್ಜಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app