ಬೆಂಗಳೂರು ಮಳೆ ಅವಾಂತರ| ಬಿಬಿಎಂಪಿಗೆ ₹350 ಕೋಟಿ ಪರಿಹಾರ ನಿಧಿ ಬಿಡುಗಡೆ ಮಾಡಿದ ಸರ್ಕಾರ

  • ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದ ಇಲಾಖೆ
  • ಕೆರೆಗಳ ನಡುವಿನ ಸಂಪರ್ಕ ಜಾಲ ಸರಿಪಡಿಸಲು ₹317 ಕೋಟಿ ವೆಚ್ಚ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಗಳಿಗೆ ₹350 ಕೋಟಿ ನೀಡಲು ಸರ್ಕಾರ ಅನುಮೋದನೆ ನೀಡಿದೆ.

ಸೆಪ್ಟೆಂಬರ್‍‌ನಲ್ಲಿ ಬೆಂಗಳೂರಿನ ಹಲವೆಡೆ ಅಧಿಕ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಮಹದೇವಪುರ, ಸನ್ನಿ ಬ್ರೂಕ್ಸ್, ರೈನ್‌ ಬೋ ಲೇಔಟ್‌, ಯಮಲೂರು ವಿಲ್ಲಾ, ಮಾರತಹಳ್ಳಿ, ಸೇರಿದಂತೆ ಹಲವೆಡೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.

ಮಳೆ ಹಾನಿ ಪರಿಹಾರಕ್ಕಾಗಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ 10 ದಿನದ ನಂತರ ನಗರಾಭಿವೃದ್ಧಿ ಇಲಾಖೆ ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದೆ.

ಬಿಬಿಎಂಪಿಯೂ ಕೆರೆಗಳ(ರಾಜಕಾಲುವೆ) ನಡುವಿನ ಸಂಪರ್ಕ ಜಾಲವನ್ನು ಸರಿಪಡಿಸಲು ₹317 ಕೋಟಿ ವೆಚ್ಚ ಮಾಡಬೇಕು ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆಗುಂಡಿ ಮುಚ್ಚುವ ಕಾರ್ಯ ಚುರುಕುಗೊಳಿಸಲು ಕಾರ್ಯಪಡೆ ರಚನೆ

ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160, ಕೆ ಆರ್ ಪುರ–₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ, ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ.

ಇನ್ನುಳಿದ ₹33 ಕೋಟಿಯನ್ನು ಬೆಂಗಳೂರಿನ 148 ಕೆರೆಗಳಿಗೆ ತೂಬು ಗೇಟ್‌ಗಳನ್ನು ಅಳವಡಿಸಲು ಬಳಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್