ಬೆಂಗಳೂರು | ಪ್ರಯಾಣಿಕನ ದುಬಾರಿ 'ಏರ್ ಪಾಡ್' ಹಿಂತಿರುಗಿಸಿದ ಆಟೋ ಚಾಲಕ

Auto drivers
  • ₹15,000 ಮೌಲ್ಯದ ಆಪಲ್ ಕಂಪನಿ 'ಏರ್ ಪಾಡ್' ಹಿಂದಿರುಗಿಸಿದ ಚಾಲಕ
  • ಫೋನ್ ಪೇ ಮೂಲಕ ಪ್ರಯಾಣಿಕರ ಅಡ್ರೆಸ್ ಪತ್ತೆ ಹಚ್ಚಿದ ಆಟೋ ಡ್ರೈವರ್

ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನ ಪ್ರಯಾಣಿಕ ಮರೆತು ಆಟೋದಲ್ಲೇ ಬಿಟ್ಟು ಹೋದ ಆಪಲ್ ಕಂಪನಿಯ ದುಬಾರಿ 'ಏರ್ ಪಾಡ್' ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದಿರುವ ಕುರಿತು ನೆಟ್ಟಿಗರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. 

ತಮ್ಮ ಕಂಪನಿಗೆ ಶಿದಿಕಾ ಎಂಬುವವರು ಮಂಗಳವಾರ ತೆರಳುವ ವೇಳೆ ₹15,000 ಮೌಲ್ಯದ ಆಪಲ್ ಕಂಪನಿಯ ಏರ್ ಪಾಡ್ ಅನ್ನು ಆಟೋದಲ್ಲೆ ಮರೆತು ಬಿಟ್ಟಿದ್ದರು. ಅದನ್ನು ಗಮನಿಸಿದ ಆಟೋ ಚಾಲಕ ಅರ್ಧ ಗಂಟೆಯ ನಂತರ, ತನ್ನ ಪ್ರಯಾಣಿಕರ ಫೋನ್‌ ಪೇ ಅಡ್ರೆಸ್ ಮೂಲಕ ಅವರ ಕಂಪನಿಯ ಬಳಿ ಹೋಗಿ, ಅವರನ್ನು ಸಂಪರ್ಕಿಸಿ 'ಏರ್ ಪಾಡ್' ಹಿಂತಿರುಗಿಸಿದ್ದಾರೆ.

Eedina App

ಇದೀಗ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.     

AV Eye Hospital ad

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ನಗರದೆಲ್ಲೆಡೆ ಮಂಜು ಕವಿದ ವಾತಾವರಣ; ಮುಂಜಾನೆಯ ಚಳಿಗೆ ನಡುಗುತ್ತಿರುವ ಜನ

'ಏರ್ ಪಾಡ್' ವಾಪಸ್ ಪಡೆದ ಶಿದಿಕಾ ”ನಾನು ನನ್ನ ಕಂಪನಿಗೆ ಆಟೋದಲ್ಲಿ ತೆರಳಿದೆ. ಗಡಿಬಿಡಿಯಲ್ಲಿ ಇಳಿದು ನನ್ನ ಏರ್ ಪಾಡ್ ಅನ್ನು ಅಲ್ಲೇ ಮರೆತೆ. ಪುನಃ ಅದು ನನ್ನ ಕೈ ಸೇರುವುದಿಲ್ಲ ಎಂದು ತಿಳಿದಿದ್ದೆ. ಆದರೆ, ಆಟೋ ಚಾಲಕ ನನ್ನ ಬಿಟ್ಟು ಹೋದ ಅರ್ಧ ಗಂಟೆಗೆ ನನ್ನ ಏರ್ ಪಾಡ್ ಹಿಂತಿರುಗಿಸಿದ್ದಾನೆ" ಎಂದು ಟ್ವೀಟ್ ಮಾಡಿದ್ದಾರೆ.

"ನಾನು ಅವರ ಆಟೋದಲ್ಲಿ ಪ್ರಯಾಣಿಸಿದ ನಂತರ ಆನ್ ಲೈನ್ ಮೂಲಕ ಹಣ ಪಾವತಿಸಿದ್ದೆ. ಈ ಮೂಲಕ ನನ್ನನ್ನು ಸಂಪರ್ಕಿಸಿ ಏರ್ ಪಾಡ್ ಹಿಂದಿರುಗಿಸಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app