ಬೆಸ್ಕಾಂ ಗ್ರಾಹಕರ ಗಮನಕ್ಕೆ ; ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ ಒಪ್ಪಂದ ರದ್ದು

  • ವಿದ್ಯುತ್ ಸಂಪರ್ಕದ ಒಪ್ಪಂದ ರದ್ದುಗೊಂಡರೆ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚನೆ
  • ವಿದ್ಯುತ್ ಬಿಲ್ ಪಾವತಿಸುವಲ್ಲಿ ನಿರ್ಲಕ್ಷ್ಯ ಬೇಡ; ಸರಿಯಾದ ಸಮಯಕ್ಕೆ ಹಣ ಪಾವತಿಸಿ

ಸತತ ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ, ವಿದ್ಯುತ್ ಸಂಪರ್ಕದ ಒಪ್ಪಂದವನ್ನೇ ರದ್ದುಗೊಳಿಸುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವಾ ಅವರು, ಬೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್ ಪಾವತಿಯನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುಂದಿನ ತಿಂಗಳು ಕಟ್ಟೋಣವೆಂದು ತಿಂಗಳುಗಟ್ಟಲೇ ಬಿಲ್ ಪಾವತಿಸದೆ, ಮುಂದೂಡುತ್ತಾ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಬಿಲ್ ಪಾವತಿಸುವ ವಾಡಿಕೆಯನ್ನು ಕೆಲವರು ರೂಢಿಸಿಕೊಂಡಿದ್ದಾರೆ. ಆದರೆ, ಇನ್ನು ಮುಂದೆ ಇದಕ್ಕೆ ಬೆಸ್ಕಾಂ ಕಡಿವಾಣ ಹಾಕಲಿರುವುದಾಗಿ ತಿಳಿಸಿದ್ದಾರೆ.

Eedina App

ಬೆಸ್ಕಾಂ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದವನ್ನು ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳುತ್ತದೆ. ಒಪ್ಪಂದ ರದ್ದತಿಯ ನಂತರ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ ಎಂದು ಮಹಾಂತೇಶ ಬೀಳಗಿ ತಿಳಿಸಿದ್ದಾರೆ. 

AV Eye Hospital ad

ಈ ಸುದ್ದಿ ಓದಿದ್ದೀರಾ?:ಕೆಐಎಲ್‌ | ಟರ್ಮಿನಲ್-2ರಲ್ಲಿ ಮೊದಲ ಬಾರಿಗೆ ಮೂರು 'ಬಾಡಿ ಸ್ಕ್ಯಾನರ್' ಅಳವಡಿಕೆ

ಅರ್ಜಿ ಸಲ್ಲಿಸಲು ಬೆಸ್ಕಾಂ ಗ್ರಾಹಕರು ಆಯಾ ಪ್ರದೇಶದ ಉಪ ವಿಭಾಗದ ಬೆಸ್ಕಾಂ ಕಚೇರಿಗಳಲ್ಲಿ ಹೊಸ ಸಂಪರ್ಕದ ಕುರಿತು ಅರ್ಜಿ ಸಲ್ಲಿಸಿ, ಪುನಃ ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಹೇಳಿದ್ದಾರೆ.

ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆಗಳಿಗೆ ಈಡಾಗುವುದು ಬೇಡವೆಂದಾದರೇ, ಗ್ರಾಹಕರು ಆಯಾ ತಿಂಗಳಿನ ವಿದ್ಯುತ್ ಬಿಲ್‌ಗಳನ್ನು ಸರಿಯಾದ ಕ್ರಮದಲ್ಲಿ ಪಾವತಿಸಲು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app