ಬೆಂಗಳೂರು | ವಿದ್ಯುತ್ ದುರಸ್ತಿ ಹಿನ್ನಲೆ; ನ.22ರಂದು ಹಲವೆಡೆ ವಿದ್ಯುತ್ ವ್ಯತ್ಯಯ

  • ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ
  • ವಿದ್ಯುತ್ ಮಾರ್ಗ ದುರಸ್ತಿ ಹಿನ್ನಲೆ ವಿದ್ಯುತ್ ಕಡಿತವಾಗಲಿದೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯ ಹಲವೆಡೆ ಬಾಕಿ ಉಳಿದ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ಹಲವು ಪ್ರದೇಶಗಳಲ್ಲಿ ಮಂಗಳವಾರ (ನ.22)ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ನ.22ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಮಾರ್ಗ ಸಂಬಂಧಿತ ಕೆಲಸಗಳು ನಡೆಯುತ್ತಿರುವುದರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?

ಯಡಿಯೂರು, ಸೋಮೇಶ್ವರನಗರ, ಮಂತ್ರಿ ಟ್ರಾಂಕ್ವಿಲ್ ಅಪಾರ್ಟ್ಮೆಂಟ್ ಮತ್ತು ಗೋಕುಲಂ ಅಪಾರ್ಟ್ಮೆಂಟ್, ವಿಜಯನಗರ, ಹೊಸಹಳ್ಳಿ, ಹಂಪಿನಗರ, ರೆಮ್ಕೊ ಲೇಔಟ್, ಕಯಾನ್ ಲೇಔಟ್, ಸೆಂಟ್ರಲ್ ಎಕ್ಸೈಸ್ ಬಡಾವಣೆ, ಎಂಸಿ ಲೇಔಟ್, ಸಿಇಎಸ್ ಲೇಔಟ್, ಬಾಪೂಜಿ ಬಡಾವಣೆ, ಜಿಕೆಡಬ್ಲ್ಯು ಬಡಾವಣೆ ಸೇರಿದಂತೆ ಹಲವು ಪ್ರದೇಶಗಳು.

ಈ ಸುದ್ದಿ ಓದಿದ್ದೀರಾ?: ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಬೆಂಗಳೂರಿನಿಂದ ವಿಶೇಷ ಬಸ್‌ ಸೇವೆ; ಕೇರಳ ರಾಜ್ಯ ಸಾರಿಗೆ ಸಂಸ್ಥೆ

ಸೆಕ್ರೆಟರಿಯೇಟ್ ಲೇಔಟ್, ಮಾರೇನಹಳ್ಳಿ, ವಿಡಿಯಾ ಲೇಔಟ್, ಅತ್ತಿಗುಪ್ಪೆ, ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್, ಬಿಎಚ್ಇಎಲ್ ಟೌನ್‌ಶಿಪ್‌, ವಿಎಚ್‌ಬಿಸಿಎಸ್ ಲೇಔಟ್, ಪ್ರಿಯದರ್ಶಿನಿ ಬಡಾವಣೆ, ವಿನಾಯಕ ಲೇಔಟ್, ಶಿವಾನಂದ ನಗರ, ಮೂಡಲಪಾಳ್ಯ, ಚಂದ್ರಾಲೇಔಟ್, ಮಾರುತಿನಗರ, ನಾಗರಭಾವಿ ಮುಖ್ಯರಸ್ತೆ, ಮೈಕೋ ಲೇಔಟ್, ಬಿಸಿಸಿ ಲೇಔಟ್, ಗಂಗೊಂಡನ ಹಳ್ಳಿ, ಪ್ರಶಾಂತ ನಗರ, ಸಂಪಿಗೆ ಬಡಾವಣೆ, ಅಮರಜ್ಯೋತಿ ನಗರ, ಎಚ್‌ವಿಆರ್ ಲೇಔಟ್, ಮಾನಸನಗರ, ಶಿಕ್ಷಕರ ಬಡಾವಣೆ, ಎನ್‌ಜಿಎಎಫ್‌ ಲೇಔಟ್‌ ಹಾಗೂ ಪಂಚಶೀಲ ನಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಉತ್ತರ ವಲಯದಲ್ಲಿ ಜಿಕೆವಿಕೆ, ಯಶೋಧ ನಗರ, ಟ್ಯಾಂಕ್ ಬಂಡ್ ರಸ್ತೆ, ವೆಂಕಟ್‌ವಿಂಗ್ ರಾಯಲ್, ಬಾಗಲೂರು ಮುಖ್ಯರಸ್ತೆ, ದ್ವಾರಕಾನಗರ, ಬಿಇಎಲ್ ದಕ್ಷಿಣ ಕಾಲೋನಿ, ಕಲಾನಗರ, ಕಮ್ಮಗೊಂಡನಹಳ್ಳಿ, ಪಾರ್ವತಮ್ಮ ಲೇಔಟ್, ಕೆನರಾ ಬ್ಯಾಂಕ್ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಟ್ಟೂರು ಲೇಔಟ್, ಮುನೇಶ್ವರ ಬಡಾವಣೆ, ಸಂತೋಷನಗರ, ವೀರಸಾಗರ, ತ್ರಿವಿಕ್ ಅಪಾರ್ಟ್‌ಮೆಂಟ್‌ಗಳು, ಹನುಮಯ್ಯ ಲೇಔಟ್, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಬಿಇಎಲ್ ಲೇಔಟ್ ಹಾಗೂ ಎಚ್‌ಎಂಟಿ ಲೇಔಟ್‌ಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app