- ಬೆಂಗಳೂರು ಒನ್ ಕೇಂದ್ರಗಳಲ್ಲಿ 'ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್' ಪಡೆಯಿರಿ
- ಗುರುತಿನ ಚೀಟಿ, ಆಧಾರ್ ಕಾರ್ಡ್, ಭಾವಚಿತ್ರವಿರುವ ದಾಖಲೆ ನೀಡಬೇಕು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಟ್ಟಡ ಕಾರ್ಮಿಕರು ಮತ್ತು ಇತರ ಕಾರ್ಮಿಕರಿಗೆ ಡಿ.1 ರಿಂದ 'ಸಹಾಯ ಹಸ್ತ ಕಾರ್ಡ್' ವಿತರಿಸಲಾಗುವುದು ಎಂದು ನಿಗಮ ತಿಳಿಸಿದೆ.
ಈ ಹಿಂದೆ ಸಹಾಯ ಹಸ್ತ ಪಾಸ್ಗಳನ್ನು ಬಸ್ ನಿಲ್ದಾಣ ಮತ್ತು ಡಿಪೋಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಕಾರ್ಮಿಕರು 'ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್' ಅನ್ನು ಸೇವಾಸಿಂಧು ಪೋರ್ಟಲ್ನ ಮೂಲಕ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸುಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ದಾಖಲೆಗಳೇನು ಬೇಕು?
'ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್'ಗೆ ನೋಂದಾಯಿತ ಕಟ್ಟಡ ಕಾರ್ಮಿಕರು, ಆಧಾರ್ ಕಾರ್ಡ್, ಭಾವಚಿತ್ರವಿರುವ ದಾಖಲೆಗಳನ್ನು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಗುರುತಿನ ಚೀಟಿ ದಾಖಲೆ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು.
ಈ ಸುದ್ದಿ ಓದಿದ್ದೀರಾ?: ಚಿಲುಮೆ ವೋಟರ್ ಗೇಟ್ | ನಿರೀಕ್ಷಣಾ ಜಾಮೀನು ಪಡೆಯಲು ಮುಂದಾದ 30 ಬಿಬಿಎಂಪಿ ಕಂದಾಯ ಅಧಿಕಾರಿಗಳು
ಕಾರ್ಡ್ನ ಫಲಾನುಭವಿಗಳು ಯಾರು?
- ಕಟ್ಟಡ ನಿರ್ಮಾಣ, ರಿಪೇರಿ ಮತ್ತು ನಿರ್ವಹಣೆ, ಕಟ್ಟಡಗಳನ್ನು ಕೆಡವುದರ ಕಾಮಗಾರಿಗಳು
- ಫ್ಲೋರಿಂಗ್, ಫಾಲ್ಸ್ ಸೀಲಿಂಗ್ , ವಾಲ್ ಪ್ಯಾನಲಿಂಗ್ ಮುಂತಾದವುಗಳನ್ನು ಒಳಗೊಂಡ ಒಳಾಂಗಣ ವಿನ್ಯಾಸ
- ಜಲ ಕಾಮಗಾರಿಗಳು, ಒಳಚರಂಡಿ ನಿರ್ಮಾಣ ಕಾಮಗಾರಿಗಳು
- ಕೂಲಿಂಗ್ ಮತ್ತು ಹೀಟಿಂಗ್ ಸಿಸ್ಟಂಗಳ ಸ್ಥಾಪನೆ ಮತ್ತು ಅಳವಡಿಕೆ
- ಕಬ್ಬಿಣ ಮತ್ತು ಲೋಹದ ಗ್ರಿಲ್ಗಳು, ಕಿಟಕಿ, ಬಾಗಿಲುಗಳ ಸ್ಥಾಪನೆ
- ಫಿಲಂ ಸೆಟ್ಗಳ ನಿರ್ಮಾಣ ಮತ್ತು ಅಳವಡಿಕೆ
- ಲಿಫ್ಟ್, ಎಸ್ಕಲೇಟರ್ ಇತ್ಯಾದಿಗಳ ಸ್ಥಾಪನೆ
- ಸಿಗ್ನೇಜ್, ರಸ್ತೆ ಪೀಠೋಪಕರಣಗಳು, ಬಸ್ ಆಶ್ರಯಗಳು, ಸ್ಟ್ಯಾಂಡ್, ಸಿಗ್ನಲಿಂಗ್ ಸಿಸ್ಟಂ ಮುಂತಾದವುಗಳ ನಿರ್ಮಾಣ
- ಫ್ರೀ-ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಮಾಡ್ಯೂಲ್ಸ್ , ಕಾಂಕ್ರೀಟ್ ಬ್ರಿಕ್ಸ್ ಬ್ಲಾಕ್ಸ್ , ಹಾಲೋ ಬಾಕ್ಸ್, ಟೈಲ್ಸ್ ಮುಂದತಾದವುಗಳ ಅಳವಡಿಕೆ ಮಾಡುವ ಕಾರ್ಮಿಕರು ಪಾಸ್ ಪಡೆಯಬಹುದು