ಬಾಲ್ಯ ವಿವಾಹ | ಮಕ್ಕಳ ಹಕ್ಕುಗಳನ್ನು ರಕ್ಷಿಸಲು ನಾನಾ ಸಂಘಟನೆಗಳ ಒತ್ತಾಯ

Chaild
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೂಚ್ಯಂಕದ ಮೇಲೆ ದೇಶದ ಅಭಿವೃದ್ಧಿ 
  • 'ಬಾಲಕಾರ್ಮಿಕ ವಿರೋಧಿ ಆಂದೋಲನ ಕರ್ನಾಟಕ' ನೇತೃತ್ವದಲ್ಲಿ ಹೋರಾಟ

ರಾಜ್ಯದಲ್ಲಿ ಬಾಲ್ಯ ವಿವಾಹ ಮತ್ತು ಬಾಲ್ಯ ಕಾರ್ಮಿಕ ಪದ್ಧತಿಯನ್ನು ಕಡ್ಡಾಯವಾಗಿ ತಡೆಗಟ್ಟಿ ನಿರ್ಮೂಲನೆಗೊಳಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಇಮೇಜ್ ಯೋಜನೆಯ ಡಾ ವಾಸುದೇವ ಶರ್ಮಾ ಎನ್ ವಿ ಒತ್ತಾಯಿಸಿದರು. 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದ ನಾನಾ ಜಿಲ್ಲೆಗಳ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿ ಮಕ್ಕಳ ಹಕ್ಕುಗಳನ್ನು ಪರ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸೇರಿಕೊಂಡು 'ಬಾಲಕಾರ್ಮಿಕ ವಿರೋಧಿ ಆಂದೋಲನ ಕರ್ನಾಟಕ' ನೇತೃತ್ವದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸುತ್ತಿದ್ದೇವೆ" ಎಂದು ತಿಳಿಸಿದರು. 

"ಸೆಪ್ಟೆಂಬರ್ 21ರಂದು ಬೆಂಗಳೂರಿನಲ್ಲಿ ಈ ಕುರಿತು ಸಮಾಲೋಚನಾ ಸಭೆ ನಡೆಸಿದ್ದು, ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ವಿಘ್ನೇಶ್ ಕುಮಾರ್, ಮಹಿಳಾ ಮಕ್ಕಳು ಕಲ್ಯಾಣ ಇಲಾಖೆಯ 'ಬಾಲ್ಯವಿವಾಹ ನಿಷೇಧ ಕೋಶ'ದ ಉಪನಿರ್ದೇಶಕಿ ಲೀನಾ ಕಲ್ಲಮ್ಮನವರ ಭಾಗವಹಿಸಿ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು" ಎಂದರು. 

"ಹಿಂದೆ ಪ್ರಪಂಚದಲ್ಲಿ ದೇಶದಲ್ಲಿ ರಕ್ಷಣೆ, ಬಾಹ್ಯಾಕಾಶ ಸೇರಿದಂತೆ ಇತರೆ ವಲಯಗಳ ಆಧಾರದ ಮೇಲೆ ದೇಶದ ಅಭಿವೃದ್ಧಿಯನ್ನು ಅಳೆಯುತ್ತಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ಅಭಿವೃದ್ಧಿಯನ್ನು ಅಳೆಯಲಾಗುತ್ತಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?; ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ | ಕಮಲ್ ನಾಥ್ ಸ್ಪರ್ಧೆ? ಹಿಗ್ಗುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ!

"ಮಕ್ಕಳಿಗೆ ಸೂಕ್ತ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಆರೈಕೆ, ರಕ್ಷಣೆ ಹಾಗೂ ಭಾಗವಹಿಸುವಿಕೆ ಆವಕಾಶ ಸಿಕ್ಕರೆ ದೇಶದ ಅಭಿವೃದ್ಧಿ ಪ್ರಾರಂಭವಾದಂತೆ. ಶಿಕ್ಷಣದಿಂದ ಉತ್ತಮ ಮೌಲ್ಯ, ಬಾಲ್ಯಾವ್ಯವಸ್ಥೆ, ಪೌಷ್ಠಿಕ ಆಹಾರ, ಆಟ ಪಾಠಗಳ ಮೂಲಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಿಂದ ಮಕ್ಕಳ ಬಾಲಕಾರ್ಮಿಕ, ಕ್ರೌರ್ಯ, ಬಾಲ್ಯ ವಿವಾಹ ದೌರ್ಜನ್ಯಗಳನ್ನು ತಡೆಯಬಹುದು" ಎಂದರು.

"ಈ ಹಿನ್ನೆಲೆಯಲ್ಲಿ ಕಾನೂನು, ನಿಯಮ ಹಾಗೂ ಕಾರ್ಯಗಳ ಅನುಷ್ಠಾನ, ನಾನಾ ಹಂತಗಳ ಮಕ್ಕಳ ಹಕ್ಕುಗಳ ಸಂರಕ್ಷಣೆ ವ್ಯವಸ್ಥೆಯ ಬಲವರ್ಧನೆ, ಬಾಲ್ಯ ವಿವಾಹವಾದ ಮಕ್ಕಳ ಪುನರ್ವಸತಿ ಸಬಲೀಕರಣದ ಯೋಜನೆಗಳು ಹಾಗೂ ಬಾಲ್ಯ ವಿವಾಹ ತಡೆಗೆ ಸಂಬಂಧಿಸಿ ಆಡಳಿತ ವ್ಯವಸ್ಥೆಗಳ ಬಲವರ್ಧನೆ ಬಗ್ಗೆ ಹಕ್ಕೊತ್ತಾಯಗಳನ್ನು ಸಲ್ಲಿಸುತ್ತಿದ್ದು ಸರ್ಕಾರ ಈ ಎಲ್ಲವುಗಳನ್ನು ಅನುಷ್ಠಾನಗೊಳಿಸಲಿ" ಎಂದು ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿ ಆಂದೋಲನ ಸರಸ್ವತಿ, ರೀಡ್ಸ್‌ ಅಧ್ಯಕ್ಷ ಸಿ ತಿಪ್ಪೇಶಪ್ಪ, ರಾಘವೇಂದ್ರ ಎಚ್ ಸಿ ಹಾಗೂ ಸಂಜೀವಯ್ಯ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್