ಬೆಂಗಳೂರು | ಐಐಎಸ್ಸಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಗೆ ಎಚ್‌ಡಿಎಫ್‌ಸಿ ನೆರವು

  • 2024ರ ಅಂತ್ಯದೊಳಗೆ ಆಸ್ಪತ್ರೆ ಕಾಮಗಾರಿ ಪೂರ್ಣ
  • 4,28,326 ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಕಾರ, ಜುಲೈ 29ರಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದ್ದು, ಇದರಲ್ಲಿರುವಂತೆ ಕಾರ್ಡಿಯಾಲಜಿ, ರೇಡಿಯಾಲಜಿ ಮತ್ತು ತುರ್ತು ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಎಸ್‌ಆರ್‌ ನಿಧಿಯಿಂದ ₹107.76 ಕೋಟಿ ರೂ. ನೀಡಲಾಗುತ್ತಿದೆ.

832 ಹಾಸಿಗೆಗಳ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ

ಐಐಎಸ್‌ಸಿಯ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯು 832 ಹಾಸಿಗೆಗಳನ್ನು ಒಳಗೊಂಡಿದ್ದು, 2024ರ ಅಂತ್ಯದೊಳಗೆ ಅದರ ಕಾಮಗಾರಿ ಪೂರ್ಣವಾಗಲಿದೆ. ಇದರಲ್ಲಿ 2025ರಲ್ಲಿ ಎಂ.ಡಿ ಮತ್ತು ಪಿಹೆಚ್‌ಡಿ ಕೋರ್ಸ್‌ಗಳನ್ನು ಕೂಡ ಪ್ರಾರಂಭಿಸಲಾಗುವುದು.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ಬೆಂಗಳೂರು: ನಿಮ್ಮ ಏರಿಯಾದಲ್ಲಿ ಮಂಗಗಳ ಹಾವಳಿಯೇ? ಡಯಲ್ ಮಾಡಿ 1533

ಆಸ್ಪತ್ರೆಯ ಹೃದ್ರೋಗ ವಿಭಾಗವು 2025 ಮತ್ತು 2029ರ ನಡುವೆ ಸುಮಾರು 1,83,000 ಹೊರರೋಗಿಗಳು ಮತ್ತು 18,300 ಒಳರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 

“ರೇಡಿಯಾಲಜಿ ವಿಭಾಗದಿಂದ ಆಸ್ಪತ್ರೆ ಪಾರಂಭವಾದ ಮೊದಲ ಐದು ವರ್ಷದಲ್ಲಿ 4,28,326 ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡುವ ಗುರಿಯಿದೆ. ಇದೇ ಅವಧಿಯಲ್ಲಿ ಕನಿಷ್ಠ 20 ಸೂಪರ್ ಸ್ಪೆಷಲಿಸ್ಟ್ ವೈದ್ಯರಿಗೆ ಮತ್ತು ತುರ್ತು ವೈದ್ಯಕೀಯ ವಿಭಾಗದಲ್ಲಿ 50 ವೈದ್ಯರಿಗೆ ತರಬೇತಿ ನೀಡುವ ನಿರೀಕ್ಷೆಯಿದೆ” ಎಂದು ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಹೇಳಿಕೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್