
ಪ್ರಯಾಣಿಕರು ಮೆಟ್ರೊ ನಿಲ್ದಾಣ ತಲುಪಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎರಡು ಮೆಟ್ರೋ ಫೀಡರ್ ಬಸ್ಗಳನ್ನು ಒದಗಿಸಿದೆ.
ಈ ಮೆಟ್ರೋ ಫೀಡರ್ ಬಸ್, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ವಿವಿಧ ಸ್ಥಳಗಳ ಮೂಲಕ ಸಂಚರಿಸಲಿದೆ. ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಮೆಟ್ರೋ ಫೀಡರ್ ಎಂಫ್-8 ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಕನ್ನಿಂಗ್ಹ್ಯಾಂ ರಸ್ತೆ, ಜೈನ್ ಆಸ್ಪತ್ರೆ, ಸರ್ದಾರ್ ಪಟೇಲ್ ಭವನ, ಗಣೇಶ ದೇವಸ್ಥಾನ, ಮೌಂಟ್ ಕಾರ್ಮಲ್ ಕಾಲೇಜು, ಕಲ್ಪನಾ ಸರ್ಕಲ್, ಸೆಂಟ್ ಆನ್ ಆಲಿ ಆಸ್ಮ ರಸ್ತೆ ಮಾರ್ಗವಾಗಿ ಕಾರ್ಯಾಚರಣೆ ನಡೆಸುತ್ತವೆ ಎಂದು ಬಿಎಂಟಿಸಿ ಪ್ರಕಟಣೆ ಹೊರಡಿಸಿದೆ.
ಮೆಟ್ರೋ ಫೀಡರ್ ಸಂಚರಿಸುವ ವೇಳಾ ಪಟ್ಟಿ ಬಿಡುಗಡೆ ಮಾಡಿಲಾಗಿದೆ. ಅದರಂತೆ ಮೆಟ್ರೋ ಫೀಡರ್ಗಳು ಕಾರ್ಯ ನಿರ್ವಹಿಸಲಿದೆ ಎಂದು ಸಾರಿಗೆ ಸಂಸ್ಥೆ ಹೇಳಿದೆ.