
ಬೆಂಗಳೂರು ನಗರದ ಹಲವೆಡೆ ನ.28ರಂದು ವಿದ್ಯುತ್ ದುರಸ್ತಿ ಕಾರ್ಯವನ್ನು ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತ ನಿಗಮ (ಬೆಸ್ಕಾಂ) ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಮಾರ್ಗ ಸಂಬಂಧಿತ ಕೆಲಸಗಳು, ಗ್ಯಾಪ್ ಕ್ರಾಸಿಂಗ್, ಇಂಟರ್ ಲಿಂಕಿಂಗ್ ಹಾಗೂ ಜಲಸಿರಿ ನೀರು ಸರಬರಾಜು ಕಾಮಗಾರಿಗಳನ್ನು ಆರಂಭಿಸುತ್ತಿರುವ ಕಾರಣ, ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ನ.28ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್ಎನ್ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್ ನ್ಯಾಷನಲ್ ಹೋಟೆಲ್, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಗಿರಿಯಪ್ಪ ಲೇಔಟ್ ಹಾಗೂ ಜಿಎಂಐಟಿ ಕಾಲೇಜು ಸೇರಿದಂತೆ ಇತರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಂದು ಬೆಸ್ಕಾಂ ತಿಳಿಸಿದೆ.