ಎಲ್‌ಪಿಜಿ ಸಿಲಿಂಡರ್‌ ಕಳ್ಳತನ ತಡೆಗಟ್ಟಲು 'ಕ್ಯೂಆರ್‌ ಕೋಡ್‌' ಅಳವಡಿಕೆ; ಹರ್‌ದೀಪ್ ಸಿಂಗ್

  • ಹೊಸ ಸಿಲಿಂಡರ್‌ಗಳಿಗೆ 'ಕ್ಯೂಆರ್‌ ಕೋಡ್‌' ವೆಲ್ಡಿಂಗ್ ಅಳವಡಿಕೆ
  • ಕ್ಯೂಆರ್ ಕೋಡ್‌ ಬಳಸಿ ಕಳೆದುಕೊಂಡ ಸಿಲಿಂಡರ್‌ ಟ್ರ್ಯಾಕ್ 

ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಕಳ್ಳತನ ತಡೆಯಲು ಮುಂದಿನ ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳಲ್ಲಿ 'ಕ್ಯೂಆರ್ ಕೋಡ್' ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಎಸ್ ಪುರಿ ತಿಳಿಸಿದ್ದಾರೆ. 

ವಿಶ್ವ ಎಲ್‌ಪಿಜಿ ವೀಕ್ 2022 ಅನ್ನು ನವೆಂಬರ್ 14ರಿಂದ 18ರವರೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್ (ಐಇಎಂಎಲ್‌) ನಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸಿದ್ದ ಅವರು ಈ ಕುರಿತು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. 

ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಎಸ್ ಪುರಿ ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಎಲ್‌ಪಿಜಿ ಸಿಲಿಂಡರ್‌ಗಳನ್ನು ಕ್ಯೂಆರ್ ಕೋಡ್‌ಗಳೊಂದಿಗೆ ಗುರುತಿಸುವ ಹೊಸ ಯೋಜನೆಯ ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಯೋಜನೆಯಿಂದಾಗಿ, ಕ್ಯೂಆರ್ ಕೋಡ್‌ಗಳನ್ನು ಬಳಸಿ ಕಳೆದುಕೊಂಡ ಸಿಲಿಂಡರ್‌ಗಳನ್ನು ಟ್ರ್ಯಾಕ್ ಮಾಡಬಹುದು. ಎಲ್‌ಪಿಜಿ ಕಳ್ಳತನವನ್ನು ತಡೆಯುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್‌ಗಳನ್ನು ಸಿಲಿಂಡರ್‌ಗೆ ಅಂಟಿಸಲಾಗುವುದು.

ಮುಂದಿನ ದಿನಗಳಲ್ಲಿ, ನೂತನ ಸಿಲಿಂಡರ್‌ಗಳನ್ನು ತಯಾರಿ ಮಾಡಿದರೆ, ಅವುಗಳಲ್ಲಿ ಕ್ಯೂಆರ್‌ ಕೋಡ್ ಇರುವಂತೆ ವೆಲ್ಡಿಂಗ್ ಮಾಡಲಾಗುವುದು ಎಂದು ಸಚಿವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app