ಬಿಬಿಎಂಪಿ | ದಕ್ಷಿಣ ವಲಯದಲ್ಲಿ ರಸ್ತೆಗುಂಡಿ ಕಂಡು ಬಂದರೆ ದೂರು ಸಲ್ಲಿಸಿ

  • ವಾರ್ಡ್ ರಸ್ತೆಗಳಲ್ಲಿ ಇದ್ದ ಗುಂಡಿಗಳನ್ನು ಮುಚ್ಚಲಾಗಿದೆ
  • 22975703ಗೆ ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಗುಂಡಿ ಕಂಡುಬಂದರೆ, ಸಾರ್ವಜನಿಕರು ದೂರು ಸಲ್ಲಿಸುವಂತೆ ಬಿಬಿಎಂಪಿ ಕೇಳಿದೆ.

ಬಿಬಿಎಂಪಿ ದಕ್ಷಿಣ ವಲಯದ ಆರು ವಿಧಾನಸಭಾ ಕ್ಷೇತ್ರಗಳಾದ ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸನವಗುಡಿ, ವಿಜಯನಗರ ಹಾಗೂ ಚಿಕ್ಕಪೇಟೆಗಳಲ್ಲಿ 48 ಹೊಸ ವಾರ್ಡ್‌ಗಳಿವೆ. ಈ ವಾರ್ಡ್‌ಗಳಲ್ಲಿರುವ ಎಲ್ಲ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿ ಇದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಈ ವಾರ್ಡ್‌ಗಳ ರಸ್ತೆಗಳಲ್ಲಿ ಎಲ್ಲಾದರೂ ಗುಂಡಿ ಬಿದ್ದಿರುವುದು ಕಂಡುಬಂದರೆ, ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ 26566362/ 22975703 ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ದೂರು ದಾಖಲಿಸುವಂತೆ ಕೇಳಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಮಳೆ, ಚಳಿ ವೈಪರೀತ್ಯ: ಮಕ್ಕಳಲ್ಲಿ ಹೆಚ್ಚಾದ ವೈರಲ್ ಜ್ವರ

ಅಥವಾ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ವಾಟ್ಸಆಪ್ ಸಂಖ್ಯೆ 9480685704ಗೆ ಜಿಯೋ ಲೊಕೇಷನ್/ವಿಳಾಸ ಇರುವ ರಸ್ತೆ ಗುಂಡಿಗಳ ಭಾವಚಿತ್ರಗಳನ್ನು ವಾಟ್ಸಆಪ್ ಸಂಖ್ಯೆಗೆ ಕಳುಹಿಸಲು ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಅವರು ವಿನಂತಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app