ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 'ಪ್ರಗತಿಯ ಪ್ರತಿಮೆ' ವೀಕ್ಷಿಸಲು ನ.13ರಂದು ಹೋದ ನಾಗರಿಕರನ್ನು ಒಳಬಿಡದೆ ಇರುವ ಕಾರಣ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸರ್ಕಾರಿ ರಜೆ ದಿನವಾದ ಕಾರಣ ನೂರಾರು ಜನರು ಪ್ರತಿಮೆ ನೋಡಲು ತೆರಳಿದ್ದಾರೆ. ಪ್ರತಿಮೆಯ ಸಮೀಪ ಜನರನ್ನು ಬಿಡದೆ ಗೇಟ್ ಹಾಕಿದ್ದಾರೆ. ಜನರನ್ನು ಒಳ ಬಿಡದೇ ಇದ್ದರೆ ಪ್ರತಿಮೆ ಸ್ಥಾಪಿಸಿದ್ದು ಯಾಕೆ ಎಂದು ಸಾರ್ವಜನಿಕರು ಕಿಡಿ ಕಾರಿದರು.
ಕೆಂಪೇಗೌಡ ಪ್ರತಿಮೆಯ ಸಮೀಪ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಪ್ರತಿಮೆ ಲೋಕಾರ್ಪಣೆಗೊಂಡರೂ ಸಹ ಭಾನುವಾರ ಜನರನ್ನು ಸಮೀಪಕ್ಕೆ ಬಿಟ್ಟಿಲ್ಲ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಗತಿ ಪ್ರತಿಮೆಯನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗದೆ ಹಲವರು ಹೊರಗಿನಿಂದಲೇ ಸೆಲ್ಫಿ ತೆಗೆದುಕೊಂಡು, ಬೇಸರದಿಂದ ಮನೆಗೆಳತ್ತ ಹೆಜ್ಜೆ ಹಾಕಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.