
- ಮೆಟ್ರೋ ಇಳಿಯುವ ಮುನ್ನ ಆ್ಯಪ್ ಮೂಲಕ ಆಟೋ ಬುಕ್ ಮಾಡಿ ಮನೆ ತಲುಪಿ
- ಕ್ಯೂ ಆರ್ ಟಿಕೆಟ್ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ
ಮುಂದಿನ ದಿನಗಳಲ್ಲಿ 'ನಮ್ಮ ಮೆಟ್ರೋ' ಆ್ಯಪ್ ಮೂಲಕ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ಕಾಯ್ದಿರಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್ಸಿಎಲ್) ತಿಳಿಸಿದೆ.
"ಒಂದು ನಿರ್ದಿಷ್ಟ ಆ್ಯಪ್ ಅಭಿವೃದ್ಧಿಪಡಿಸಿ, ಅದರಿಂದಲೇ ನಗರದಲ್ಲಿ ಹಲವು ಬಗೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವಂತಹ ಏಕರೂಪ ಸೌಕರ್ಯ ಮುಂದಿನ ದಿನಗಳಲ್ಲಿ ಬರಲಿದೆ. ಮೆಟ್ರೊದಲ್ಲಿ ಕುಳಿತೇ ಇಳಿಯುವ ಸ್ಥಳದಿಂದ ಟ್ಯಾಕ್ಸಿ, ಆಟೋ ಬುಕ್ ಮಾಡಿಕೊಳ್ಳುವಂತ ಯೋಜನೆ ರೂಪಿಸಲಾಗಿದೆ" ಎಂದು ಬಿಎಂಆರ್ಸಿಎಲ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ಈ ದಿನ.ಕಾಮ್ಗೆ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸರ್ಜಾಪುರ ಮತ್ತು ಹೆಬ್ಬಾಳ ಮೆಟ್ರೋ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ಆರಂಭ
ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸುಡುವಂತಹ ಸಾಂಪ್ರದಾಯಿಕ ವ್ಯವಸ್ಥೆಯಿಂದ ಹೊರಬಂದು ಸೌರಶಕ್ತಿ, ವಿಂಡ್ಮಿಲ್ಗಳ ಉಪಯೋಗದಂತಹ ಪರ್ಯಾಯ ಮಾರ್ಗಗಳನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ. ಟಿಕೆಟ್ ಕೊಳ್ಳಲು ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಇತ್ತೀಚೆಗೆ ಕ್ಯೂಆರ್ ಕೋಡ್ ಆರಂಭಿಸಲಾಗಿದ್ದು, ಅದರ ಮೂಲಕ ಇ-ಟಿಕೆಟ್ ಸೇವೆ ಪಡೆಯುವ ಸೌಲಭ್ಯವನ್ನು ಬಿಎಂಆರ್ಸಿಎಲ್ ಒದಗಿಸಿದೆ.
"ಇದೀಗ ಕ್ಯೂಆರ್ ಟಿಕೆಟ್ ಬಳಕೆದಾರರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಅದರಂತೆ ಬಿಎಂಆರ್ಸಿಎಲ್ ಸಿಬ್ಬಂದಿಗಳು ಸಹ ಇ-ಟಿಕೆಟ್ಗಳಿಗಾಗಿ ಹೆಚ್ಚು ಶ್ರಮ ವಹಿಸುತ್ತಿದ್ದಾರೆ" ಎಂದು ಶ್ರೀನಿವಾಸ್ ತಿಳಿಸಿದರು.
ಸಿಟಿಲಿಟಿ ಮತ್ತು ಮೊಬಿಲಿಟಿ ಆ್ಯಸ್ ಎ ಸೊಲ್ಯುಷನ್ ಎಂಬ ಏಜೆನ್ಸಿಗಳು ಟ್ಯಾಕ್ಸಿ ಮತ್ತು ಆಟೋ ಸೇವೆ ನೀಡಲು ಕೆಲಸ ಮಾಡುತ್ತಿವೆ. ಇದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಲಾಗುತ್ತದೆ. ನಂತರದಲ್ಲಿ ಮೆಟ್ರೋ ರೈಡ್ನಂತಹ ಸಣ್ಣ ಅಗ್ರಿಗ್ರೇಟರ್ಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.