ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ ಶ್ರೇಯಾಂಕ; ಅತ್ಯುನ್ನತ ಸ್ಥಾನ ಪಡೆದುಕೊಂಡ ಬೆಂಗಳೂರಿನ ಐಐಎಸ್‌ಸಿ

  • ಭಾರತದ ಅಗ್ರ ಏಳು ವಿವಿಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸ್ಥಾನ
  • 'ಟೈಮ್ಸ್ ಹೈಯರ್ ಎಜುಕೇಶನ್' ಬಿಡುಗಡೆ ಮಾಡಿದ ವರದಿ ಇಂದು ಪ್ರಕಟ 

‘ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ’ ಶ್ರೇಯಾಂಕದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅತ್ಯುನ್ನತ ಸ್ಥಾನ ಪಡೆದುಕೊಂಡಿರುವ ಬಗ್ಗೆ ‘ಟೈಮ್ಸ್ ಹೈಯರ್ ಎಜುಕೇಶನ್’ ಬಿಡುಗಡೆ ಮಾಡಿದ ವರದಿಯಿಂದ ತಿಳಿದುಬಂದಿದೆ.

'ಟೈಮ್ಸ್ ಹೈಯರ್ ಎಜುಕೇಶನ್' ಇಂದು (ನ. 24) ಬಿಡುಗಡೆ ಮಾಡಿದ ಈ ವರ್ಷದ 'ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ' ಶ್ರೇಯಾಂಕ ಮತ್ತು ಸಮೀಕ್ಷೆಯ (ಜಿಎಯುಆರ್‌ಎಸ್) ವರದಿಯಲ್ಲಿ ಒಟ್ಟು ಏಳು ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿವೆ.

ಈ ಬಾರಿ ಮೂರು ಭಾರತೀಯ ಸಂಸ್ಥೆಗಳು ಅಗ್ರ 100ರಲ್ಲಿ ಸ್ಥಾನ ಪಡೆದುಕೊಂಡಿವೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಈ ಶ್ರೇಯಾಂಕದಲ್ಲಿ 29ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) 58ನೇ ಸ್ಥಾನ ಪಡೆದುಕೊಂಡಿದೆ. ಐಐಟಿ ಬಾಂಬೆ 72ನೇ ಸ್ಥಾನದಲ್ಲಿದೆ.

ಜೊತೆಗೆ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌' (ಐಐಎಂ), ಐಐಟಿ-ಖರಗ್ಪುರ, ಅಮಿಟಿ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ವಿಶ್ವವಿದ್ಯಾನಿಲಯಗಳು ಕೂಡ ‘ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ' ಶ್ರೇಯಾಂಕದಲ್ಲಿ ಅಗ್ರ 250ರಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.

ಜಾಗತಿಕವಾಗಿ, 'ಮೆಸ್ಯಾಚೂಯೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (ಎಂಐಟಿ) ಕಳೆದ ವರ್ಷದಂತೆಯೇ ಈ ವರ್ಷದ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ಎಂಐಟಿ ನಂತರ ‘ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯವು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಈ ಮೂರು ವಿಶ್ವವಿದ್ಯಾಲಯಗಳು ಸತತ ಎರಡನೇ ಬಾರಿಗೆ ಒಂದೇ ಕ್ರಮದಲ್ಲಿ ಅಗ್ರ ಮೂರು ಶ್ರೇಯಾಂಕಗಳನ್ನು ಪಡೆದುಕೊಂಡಿವೆ.

ಈ ಸುದ್ದಿ ಓದಿದ್ದೀರಾ? ದೆಹಲಿ ವಿವಿ | ಪದವಿಗೆ ಹಿಂದಿ ಪರೀಕ್ಷೆ ಕಡ್ಡಾಯ; ಮಧ್ಯಪ್ರವೇಶಿಸುವಂತೆ ಕೇಂದ್ರ ಸಚಿವರಿಗೆ ಆಗ್ರಹ

‘ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ’ ಮತ್ತು ‘ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ’ಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಈ ವರ್ಷ ‘ಆಕ್ಸ್‌ಫರ್ಡ್’ ವಿಶ್ವವಿದ್ಯಾಲಯವು ಎಂಟನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ತನ್ನ ಶ್ರೇಯಾಂಕ ಹೆಚ್ಚಿಸಿಕೊಂಡಿದೆ. ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯವು ಈ ವರ್ಷ ಆರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಇಳಿದಿದೆ. 

‘ಸಿಂಗಾಪುರದ ನ್ಯಾಷನಲ್ ವಿಶ್ವವಿದ್ಯಾಲಯ’ ಒಂಭತ್ತನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೇರಿದೆ. ‘ಪ್ರಿನ್ಸ್‌ಟನ್’ ವಿಶ್ವವಿದ್ಯಾಲಯ ಹತ್ತರಿಂದ ಒಂಬತ್ತನೇ ಸ್ಥಾನಕ್ಕೆ ಬಂದಿದೆ. 2021ರಲ್ಲಿ ಏಳನೇ ಸ್ಥಾನದಲ್ಲಿದ್ದ ‘ಯೇಲ್ ವಿಶ್ವವಿದ್ಯಾಲಯ’ವು ಈ ವರ್ಷ ಹತ್ತನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದೆ.

ಈ ವರ್ಷ ಅಮೆರಿಕದ ಆರು ವಿಶ್ವವಿದ್ಯಾಲಯಗಳು, ಇಂಗ್ಲೆಂಡ್‌ನ ಎರಡು, ಜಪಾನ್‌ನ ಒಂದು ಹಾಗೂ ಸಿಂಗಾಪುರದ ಒಂದು ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಚೀನಾ, ಫ್ರಾನ್ಸ್, ಭಾರತ, ಸ್ಪೇನ್, ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಇಸ್ರೇಲ್ ಸೇರಿದಂತೆ 44 ದೇಶಗಳು ಮತ್ತು ಪ್ರದೇಶಗಳನ್ನು ಪಟ್ಟಿಯ ಕೊನೆಯ ಸ್ಥಾನದಲ್ಲಿವೆ. ಕೋವಿಡ್ ನಂತರ ಉದ್ಯೋಗದಾತರಿಗೆ ಡಿಜಿಟಲ್ ಕೌಶಲ್ಯಗಳು ಪ್ರಮುಖ ಅಂಶಗಳಾಗಿವೆ ಎಂದು ಸಮೀಕ್ಷೆ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180