ಬೆಂಗಳೂರು | ಮಲ ಬಾಚುವ ಕಾರ್ಮಿಕರು ಕಂಡು ಬಂದಲ್ಲಿ ತಿಳಿಸಿ: ಬಿಬಿಎಂಪಿ ವಿಶೇಷ ಆಯುಕ್ತ

  • 2013ರಿಂದ ಮಲ-ಮೂತ್ರವನ್ನು ಕೈಯಿಂದ ಸ್ವಚ್ಛಗೊಳಿಸುವುದಕ್ಕೆ ನಿಷೇಧ
  • ಸೆಪ್ಟೆಂಬರ್ 6ರೊಳಗೆ ಮಲ ಬಾಚುವ ಕಾರ್ಮಿಕರ ಮಾಹಿತಿ ನೀಡಲು ಮನವಿ

2012-13ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ 201 ಮಲ ಬಾಚುವವರನ್ನು ಗುರುತಿಸಿದ್ದು, 167 ಮಂದಿ ಪುನರ್ವಸತಿ ಫಲಾನುಭವಿಗಳಾಗಿದ್ದಾರೆ. ಇನ್ನುಳಿದ 34 ಮಂದಿ ಸ್ಥಳಾಂತರಗೊಂಡಿದ್ದು, ಅವರ ಮಾಹಿತಿ ದೊರತಲ್ಲಿ ಪಾಲಿಕೆಗೆ ತಿಳಿಸಿ ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.

ಮಲ-ಮೂತ್ರವನ್ನು ಕೈಯಿಂದ ಸ್ವಚ್ಛಗೊಳಿಸಿ ಹೊತ್ತು ಸಾಗಿಸುವ (ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್) ಪದ್ಧತಿಯನ್ನು ದೌರ್ಜನ್ಯ ಎಂದು ಪರಿಗಣಿಸಿ ನಿಷೇಧಿಸಲಾಗಿದೆ. ಇದಾದ ನಂತರ ಬಿಬಿಎಂಪಿ ನಡೆಸಿದ ಸಮೀಕ್ಷೆಯಿಂದಾಗಿ 201 ಮಂದಿ ಮಲ ಬಾಚುವವರು ಪತ್ತೆಯಾಗಿದ್ದು, ಅವರ ಪೈಕಿ 167 ಮಂದಿಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಅಭಿವೃದ್ಧಿ ನಿಗಮದಿಂದ ಅನುಮೋದನೆ ಪಡೆದು ಪುರ್ನವಸತಿ ಕಲ್ಪಿಸಿ, ಗುರುತಿನ ಚೀಟಿ ನೀಡಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮುಂದಿನ ಚುನಾವಣೆಗೂ ಹಳೆಯ ಮತಗಟ್ಟೆಗಳೇ ಮುಂದುವರೆಯಲಿವೆ

ವಲಯವಾರು ಸ್ಥಳಾಂತರಗೊಂಡಿರುವ 34 ಮಲ ಬಾಚುವವರ ಹೆಸರುಗಳ ಪಟ್ಟಿ ಬಿಬಿಎಂಪಿ ಬಳಿ ಇದ್ದು, ಅವರ ಕುರಿತು ಅಥವಾ ಅವರ ಕುಟುಂಬ ಸದಸ್ಯರ ಬಗ್ಗೆ ಹಾಗೂ ವಾಸಸ್ಥಳಗಳ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾದಲ್ಲಿ ಸೆಪ್ಟೆಂಬರ್ 6ರ ಒಳಗಾಗಿ ಬಿಬಿಎಂಪಿ ಕಚೇರಿಗೆ ಮಾಹಿತಿ ನೀಡಬಹುದು (ಸಂಪರ್ಕ ಸಂಖ್ಯೆ 9480685854) ಎಂದು ಪಾಲಿಕೆ ಮನವಿ ಮಾಡಿದೆ. 

ಮಲ ಬಾಚುವವರ ಹೆಸರುಗಳ ಪಟ್ಟಿ

Image

 

Image

 

Image
ನಿಮಗೆ ಏನು ಅನ್ನಿಸ್ತು?
0 ವೋಟ್