ಬೆಂಗಳೂರು | ನಾಲ್ಕು ತಿಂಗಳ ಹಿಂದೆ ಒಡವೆ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ ನಿರ್ವಾಹಕ

  • ನಿರ್ವಾಹಕ ಅಶೋಕ್ ಜಾದವ್‌ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ಎಂ ಡಿ ಶ್ಲಾಘನೆ
  • ಈ ಹಿಂದೆಯೂ ಮಹಿಳೆಯರ ಹಣ ಮತ್ತು ಒಡವೆ ಕದಿದ್ದ ಆರೋಪಿಗಳು

ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಕ್ಲಬ್ ಕ್ಲಾಸ್ ವೋಲ್ವೋ ಬಸ್ಸಿನಲ್ಲಿ ನಾಲ್ಕು ತಿಂಗಳ ಹಿಂದೆ ಕಳ್ಳತನ ಮಾಡಿ, ಪರಾರಿಯಾಗಿದ್ದ ದರೋಡೆಕೋರರನ್ನು ಬಸ್ ನಿರ್ವಾಹಕ ಅಶೋಕ್ ಜಾದವ್ ಎಂಬವರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜು. 10ರಂದು ಮಂಗಳೂರು 2ನೇ ಘಟಕದ ಬಸ್‌ ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿರುವಾಗ ಉಪ್ಪಿನಂಗಡಿಯ ಗಡಿಯಾರದ ಬಳಿ, ಕೆಲ ಸಮಯ ಪ್ರಯಾಣಿಕರಿಗಾಗಿ ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಇಬ್ಬರು ಪ್ರಯಾಣಿಕರು ಇಳಿದು ಹೋಗಿದ್ದರು. ಸುಮಾರು ನಿಮಿಷಗಳ ಕಾಲ ಅವರಿಗಾಗಿ ಕಾದು ನೋಡಿ ಅವರು ಮತ್ತೆ ಬರದಿದ್ದಾಗ ನಿಗಮದ ಸೂಚನೆಯಂತೆ ಬಸ್‌ ಮುಂದೆ ಸಾಗಿತ್ತು.

Eedina App

ಅನುಮಾನಗೊಂಡ ನಿರ್ವಾಹಕ, ಪ್ರಯಾಣಿಕರಿಗೆ ಬ್ಯಾಗ್‌ಗಳನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಿದ್ದರು. ಈ ವೇಳೆ ಲಕ್ಷ್ಮಿ ಎಂಬ ಮಹಿಳೆಯ ಹಣ ಮತ್ತು ಒಡವೆ ಕಳ್ಳತನವಾಗಿರುವುದು ಕಂಡು ಬಂದಿತ್ತು. ಬಳಿಕ ಈ ಬಗ್ಗೆ ಪುತ್ತೂರು ಮತ್ತು ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಗ್ರಾಹಕರ ಸಮ್ಮತಿಯಿಲ್ಲದೇ ಕ್ಯಾರಿ ಬ್ಯಾಗ್‌ಗೆ ದರ ವಿಧಿಸಿದ್ದಕ್ಕಾಗಿ ರಿಲಯನ್ಸ್‌ಗೆ ₹7,024 ದಂಡ

AV Eye Hospital ad

ನ. 12ರ ರಾತ್ರಿ 9.45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳಲು ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹತ್ತಿದ್ದರು. ನಿರ್ವಾಹಕ ಅಶೋಕ್ ಜಾದವ್ ಅವರು ಟ್ರಿಪ್ ಶೀಟ್ ಪರಿಶೀಲಿಸುತ್ತಿರುವಾಗ ಇಬ್ಬರು ಆರೋಪಿಗಳು ಮೊದಲೇ ಬಂದು ಕುಳಿತಿದ್ದರು.

ಅನುಮಾನಗೊಂಡ ನಿರ್ವಾಹಕ, ಈ ಹಿಂದೆ ಅವರು ಬಂದಿದ್ದಾಗ ಕಳವಾದ ಬಗ್ಗೆ ನೆನಪು ಮಾಡಿಕೊಂಡು ಅವರ ಕುರಿತಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಆ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಈ ಹಿಂದೆ ಕಳವು ಮಾಡಿರುವ ಮಾಹಿತಿ ನೀಡಿದ್ದಾರೆ.

ಸಮಯಪ್ರಜ್ಞೆ ಮೆರೆದ ಬಸ್ ನಿರ್ವಾಹಕ ಅಶೋಕ್ ಜಾದವ್ ಅವರ ಕಾರ್ಯ ತತ್ಪರತೆಯನ್ನು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಶ್ಲಾಘಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app