ಬೆಂಗಳೂರು | ಜೂನ್ 2023ರ ವೇಳೆಗೆ ಹಳದಿ ಮಾರ್ಗದ ಮೆಟ್ರೋ ರೈಲು ಸಂಚಾರ

  • ಹಳದಿ ಮಾರ್ಗದ ಮೆಟ್ರೋ ಕಾಮಗಾರಿಗೆ ₹4,255 ವೆಚ್ಚ
  • 16 ನಿಲ್ದಾಣಗಳನ್ನು ಒಳಗೊಂಡ 'ನಮ್ಮ ಮೆಟ್ರೋ' ನಿರ್ಮಾಣ

ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮೆಟ್ರೋ ರೈಲು ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಜೂನ್ 2023 ಕ್ಕೆ ವಾಣಿಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಯಮಿತ ನಿಗಮ (ಬಿಎಂಆರ್‌ಸಿಎಲ್) ಭರವಸೆ ನೀಡಿದೆ. 

ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ 18.82 ಕಿ.ಮೀ ಉದ್ದದ 'ನಮ್ಮ ಮೆಟ್ರೋ' ಮಾರ್ಗವನ್ನು ಹಳದಿ ಮಾರ್ಗವೆಂದು ಹೆಸರಿಡಲಾಗಿದೆ. ಈ ಮಾರ್ಗದ ಮೆಟ್ರೋ ಕಾಮಗಾರಿಗೆ ₹4,255 ಕೋಟಿ ವೆಚ್ಚಾವಾಗಿದೆ ಎಂದು ಬಿಎಂಆರ್‍‌ಸಿಎಲ್ ತಿಳಿಸಿದೆ.

Eedina App

ಹಳಿ ಜೋಡಣೆ, ಸಿಗ್ನಲಿಂಗ್ ಅಳವಡಿಕೆ ಕಾಮಗಾರಿ ಬಾಕಿ

ಒಂದನೇ ಪ್ಯಾಕೇಜ್‌ನ ಬೊಮ್ಮಸಂದ್ರ-ಬೆರಟೇನ ಅಗ್ರಹಾರ ನಡುವಿನ 6.38 ಕಿ.ಮೀ ಮಾರ್ಗ, ಎರಡನೇ ಪ್ಯಾಕೇಜ್‌ನ ಬೆರಟೇನ ಅಗ್ರಹಾರ-ಬೊಮ್ಮನಹಳ್ಳಿ ನಡುವಿನ 6.38 ಕಿ.ಮೀ ಮಾರ್ಗದ ಸಿವಿಲ್ ಕಾಮಗಾರಿಗಳು ಶೇ. 99 ರಷ್ಟು ಪೂರ್ಣಗೊಂಡಿವೆ. ಮೂರನೇ ಪ್ಯಾಕೇಜ್‌ನ ಅಡಿ 6.37 ಕಿ.ಮೀ ಮಾರ್ಗದ ಸಿವಿಲ್ ಕೆಲಸವು ಶೇ. 95ರಷ್ಟು ಮುಗಿದಿದೆ. ಹಳಿ ಜೋಡಣೆ, ಸಿಗ್ನಲಿಂಗ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. .

AV Eye Hospital ad

ಈ ಸುದ್ದಿ ಓದಿದ್ದೀರಾ?: ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಪುನೀತ್ ರಾಜ್‌ಕುಮಾರ್ ಮತ್ತು ವಿರಾಟ್ ಕೊಹ್ಲಿ ಹೆಸರಿಡಲು ಆಗ್ರಹ

ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ಸೇರಿದಂತೆ 16 ನಿಲ್ದಾಣಗಳನ್ನು ಒಳಗೊಂಡ ಹಳದಿ ಮಾರ್ಗದ 'ನಮ್ಮ ಮೆಟ್ರೋ' ನಿರ್ಮಾಣವಾಗುತ್ತಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app