
- ದರ ಏರಿಕೆಗೆ ಮನವಿ ಮಾಡಿರುವ ಕೆಎಂಎಫ್
- 2 ರೂ. ಏರಿಕೆಗೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ
ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಹಾಲಿನ ದರ ಏರಿಕೆಗೆ ಸಲ್ಲಿಸಿದ್ದ ಪರಿಷ್ಕೃತ ಮನವಿಯನ್ನು ಸರ್ಕಾರ ಪುರಸ್ಕರಿಸುವ ಸಾಧ್ಯತೆ ಇದೆ. ಹೀಗಾದಲ್ಲಿ, ರೈತರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಹಾಲು, ಮೊಸರಿನ ದರವನ್ನು 2 ರೂ ಏರಿಸುವ ಸಾಧ್ಯತೆಯಿದೆ.
ಈ ಹಿಂದೆ ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಿ ಎಂದು ಕೆಎಂಎಫ್ ಹಲವಾರು ಬಾರಿ ಒತ್ತಾಯ ಮಾಡಿತ್ತು. ಆದರೆ, ಪರಿಷ್ಕರಣೆ ಮಾಡುವುದರಲ್ಲಿ ರಾಜ್ಯ ಸರ್ಕಾರವು ವಿಳಂಬ ತೋರಿತ್ತು. ಈ ಹಿನ್ನಲೆಯಲ್ಲಿ, ಮರಳಿ ಸಭೆ ನಡೆಸಿದ್ದ ಕೆಎಂಎಫ್ ಹೊಸ ಪ್ರಸ್ತಾವ ಸಲ್ಲಿಸಿ, 2 ರೂ ದರ ಏರಿಕೆಗೆ ಮನವಿ ಮಾಡಿತ್ತು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ವಾಹನಗಳ ಮೇಲೆ ಮೊಬೈಲ್ ಗಾರ್ಡನ್; ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಹೊಸ ಪ್ರಸ್ತಾವದಂತೆ, ಹಾಲು ಮತ್ತು ಮೊಸರಿನ ಪರಿಷ್ಕೃತ ದರದಲ್ಲಿ 2 ರೂ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ಹಾಲಿಗೆ 2 ರೂ. ದರ ಏರಿಕೆಯಾದರೆ ನಂದಿನಿ ಸಾಮಾನ್ಯ ಹಾಲಿನ (ನೀಲಿ ಪ್ಯಾಕೆಟ್) ಬೆಲೆ ಲೀಟರ್ಗೆ 37 ರೂ.ನಿಂದ 39 ರೂ. ಏರಿಕೆಯಾಗಲಿದೆ. ಸ್ಪೆಷಲ್ ಹಾಲಿನ ದರ ಪ್ರತಿ ಲೀಟರ್ಗೆ 43 ರೂ.ನಿಂದ 45 ರೂ.ಗೆ ಹಾಗೂ ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್ಗೆ 48 ರೂ. ನಿಂದ 50 ರೂ.ಗೆ ಹೆಚ್ಚಿಸಲಾಗುತ್ತದೆ.