
- ಇಂಧನ ಕೇಂದ್ರಗಳಲ್ಲಿ 'ಇವಿ ಚಾರ್ಜಿಂಗ್' ಕೇಂದ್ರ ಸ್ಥಾಪನೆ
- ಗುತ್ತಿಗೆ ಆಧಾರದ ಮೇಲೆ ತೈಲ ಕೇಂದ್ರ ತೆರೆಯಲು ಅವಕಾಶ
ಶುಲ್ಕ ರಹಿತ ಆದಾಯ ಗಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ರಾಜ್ಯದಾದ್ಯಂತ 46 ಬಸ್ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಇಂಧನ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಮನಗರ, ತುಮಕೂರು, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ದಾವಣಗೆರೆ, ಪುತ್ತೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕ ಮಗಳೂರು, ಚಿತ್ರದುರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಇಂಧನ ಕೇಂದ್ರ ನಿರ್ಮಿಸಲಾಗುತ್ತದೆ.
ಮಾಸಿಕ ಪರವಾನಗಿ ಶುಲ್ಕ ವಿಧಿಸುವುದು ‘ಕಮಿಷನ್’ ಪಾವತಿಯ ಮೇಲೆ ಇಂಧನ ಮತ್ತು ಇಂಧನೇತರ ಉತ್ಪನ್ನಗಳ ಮಾರಾಟ ಮಾಡುವಂತೆ, ಕೆಎಸ್ಆರ್ಟಿಸಿಯು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿ (ಓಎಂಸಿಎಸ್) ಗಳಿಗೆ ಈ ಕುರಿತಾಗಿ ಮಾಹಿತಿ ನೀಡಿತ್ತು. ನವೆಂಬರ್ ಅಂತ್ಯದಲ್ಲಿ ಟೆಂಡರ್ ತೆರೆಯುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಆಮೆವೇಗದಲ್ಲಿ 'ವೈಟ್ ಟಾಪಿಂಗ್' ಕಾಮಗಾರಿ; ರಸ್ತೆಗುಂಡಿಗಳಿಂದ ಹೆಚ್ಚಿದ ಅಪಘಾತ
ಕರ್ನಾಟಕದ 17 ಜಿಲ್ಲೆಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ ನಿರ್ಮಿಸುವ ಮೂಲಕ ಹೆಚ್ಚುವರಿ ಆದಾಯ ಗಳಿಸುವುದರ ಕುರಿತು ನಿಗಮ ಯೋಜನೆ ರೂಪಿಸಿದೆ.
ಆಸಕ್ತರು ಇಂಧನ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ಗಳು, ಸಿಎನ್ಜಿ ಸ್ಟೇಷನ್, ಆಹಾರ ಮಳಿಗೆಗಳು ಹಾಗೂ ಎಟಿಎಂ ನಂತಹ ಮುಂತಾದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಈ ಇಂಧನ ಕೇಂದ್ರಗಳಲ್ಲಿ ಎ, ಬಿ ಮತ್ತು ಸಿ ವಲಯಗಳಾಗಿ ವರ್ಗೀಕರಿಸಲಾಗುತ್ತದೆ ಮತ್ತು ಪರವಾನಗಿ ಶುಲ್ಕದ ವಿಷಯದಲ್ಲಿ ತಿಂಗಳಿಗೆ ಒಟ್ಟು ₹43 ಲಕ್ಷ ಗಳಿಸುವ ನಿರೀಕ್ಷೆಯಿದೆ.
ಅಂಗಡಿ ಮಳಿಗೆ ತೆರೆಯಲು ಕರಾರು ಒಪ್ಪಂದ ಮಾಡಿಕೊಳ್ಳಲಾಗುವುದು. ಈ ಒಪ್ಪಂದದ ವಾಯಿದೆ 10 ವರ್ಷಗಳ ಅವಧಿಗೆ ಸೀಮಿತವಾಗಿರುತ್ತದೆ. ಆಸಕ್ತಿಯುಳ್ಳ ಗುತ್ತಿಗೆದಾರರು ಇದನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು.