ಲಾಲ್‌ಬಾಗ್‌ ಪುಷ್ಪ ಪ್ರದರ್ಶನ| ಪ್ರಯಾಣಿಕರಿಗೆ ಮೂರು ದಿನಗಳ ರಿಯಾಯಿತಿ ಟಿಕೆಟ್‌ ಘೋಷಿಸಿದ ʼನಮ್ಮ ಮೆಟ್ರೋʼ

namma metro
  • ಬೆಳಗ್ಗೆ 8ರಿಂದ ಸಂಜೆ 6ರವರೆಗೂ ಟಿಕೆಟ್‌ ಲಭ್ಯ
  • ಕೇವಲ 30 ರೂ.ಗಳಲ್ಲಿ ಸಂಚರಿಸಬಹುದು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ನೋಡಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಆಗಸ್ಟ್ 13 ರಿಂದ 15 ರವರೆಗೆ "ರಿಟರ್ನ್‌ ಜರ್ನಿ"ಗಾಗಿ, 30ರೂಗಳ, ಪೇಪರ್‌ ಟಿಕೆಟ್ ಸೌಲಭ್ಯವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಿತ ನಿಯಮ(ಬಿಎಂಆರ್‍‌ಸಿಎಲ್‌) ಒದಗಿಸುತ್ತಿದೆ. 

ನಮ್ಮ ಮೆಟ್ರೋ ಎಲ್ಲ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ, ಮೂರು ದಿನಗಳ ರಿಯಾಯಿತಿ ಟಿಕೆಟ್‌ ಪಡೆಯಲು ಬೆಳಗ್ಗೆ 8 ರಿಂದ ಸಂಜೆ 6ರವರೆಗೂ ಸಮಯ ನಿಗದಿಯಾಗಿದ್ದು, ಇಷ್ಟರಲ್ಲಿ  ಪೇಪರ್‌ ಟಿಕೆಟ್‌ ಪಡೆದು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಾಲ್ ಬಾಗ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದು ಎಂದು ಬಿಎಮ್‌ಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಪೇಪರ್ ಟಿಕೆಟ್ ದಿನದ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದ್ದು, ಮರು ದಿನಕ್ಕೆ ಬೇರೆ ಟಿಕೆಟ್ ಪಡೆಯ ಬೇಕೆಂದು ತಿಳಿಸಿದ್ದಾರೆ. ಲಾಲ್‌ಬಾಗ್ ಅಲ್ಲದೇ ಮೆಟ್ರೋ ಓಡಾಡುವ ಯಾವುದೇ ಪ್ರದೇಶಗಳಲ್ಲಿ 30 ರೂ. ಪೇಪರ್ ಟಿಕೆಟ್ ಪಡೆದು ಸಂಚರಿಸಬಹುದು ಎಂದು ಬಿಎಮ್ಆರ್‌ಸಿಎಲ್‌ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಈದ್ಗಾ ಮೈದಾನದ ವಿವಾದಗಳಿಗೆ ತೆರೆ ಎಳೆಯಲು ಶಾಂತಿಸಭೆ: ಡಿಸಿಪಿ ಲಕ್ಷ್ಮಣ್‌ ನಿಂಬರಗಿ

ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕಾಗಿ ನಿಯೋಜನೆಗೊಂಡಿರುವ ರಿಯಾಯಿತಿ ಟಿಕೆಟ್‌ನಂತೆ, ಈಗಾಗಲೇ ನಮ್ಮ ಮೆಟ್ರೋ ಒದಗಿಸಿರುವ, ಸ್ಮಾರ್ಟ್‌ಕಾರ್ಡ್‌ ಬಳಸುತ್ತಿರುವವರಿಗೆ ಮತ್ತು ಪೇಪರ್ ಟಿಕೆಟ್ ಪಡೆಯದೆ ಟೋಕನ್ ಪಡೆಯುವವರಿಗೂ ಸಹ ಈ ಬಿಎಮ್‌ಆರ್‌ಸಿಎಲ್‌ನ ಈ ಯೋಜನೆಯು ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಪ್ರತಿ ವರ್ಷವು ನಮ್ಮ ಮೆಟ್ರೋ ಆಗಸ್ಟ್‌ 15 ಮತ್ತು ಜನವರಿ 26, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ಪಂದ್ಯ ನಡೆಯುವ ಸಮಯದಲ್ಲಿ, ಅಭಿಮಾನಿಗಳ ಸಮಯ ಉಳಿಸಲು ಮತ್ತು ಸರತಿ ಸಾಲುಗಳನ್ನು ಕಡಿಮೆ ಮಾಡಲು ಈ ರೀತಿಯ 'ರಿಟರ್ನ್‌ ಟಿಕೆಟ್' ವ್ಯವಸ್ಥೆಯನ್ನು ಬಿಎಮ್‌ಆರ್‌ಸಿಎಲ್‌ ಕಲ್ಪಿಸುತ್ತದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್