ಒಂದು ನಿಮಿಷದ ಓದು | ಎಸ್‌ ಕೆ ಕಾಂತಾ ಅವರಿಗೆ ಜೆ.ಎಚ್‌. ಪಟೇಲ್‌ ಪ್ರಶಸ್ತಿ

S K Kantha

ಬೆಂಗಳೂರು: ವಿ. ಸೋಮಣ್ಣ ಪ್ರತಿಷ್ಠಾನ ವತಿಯಿಂದ ನೀಡುವ 2022ನೇ ಸಾಲಿನ ʼಜೆ.ಎಚ್‌. ಪಟೇಲ್‌ ಪ್ರಶಸ್ತಿʼ ಗೆ ಸಮಾಜವಾದಿ ಚಿಂತಕ ಮತ್ತು ಮಾಜಿ ಸಚಿವ ಎಸ್‌.ಕೆ. ಕಾಂತಾ ಅವರು ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜಾ ಅವರನ್ನು ಒಳಗೊಂಡ ಸಮಿತಿ ಎಸ್‌.ಕೆ. ಕಾಂತಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜೆ.ಎಚ್‌. ಪಟೇಲರ ಜನ್ಮದಿನವಾದ ಅಕ್ಟೋಬರ್‌ 1 ರಂದು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿ ಫಲಕ ಮತ್ತು 50 ಸಾವಿರ ನಗದು ಒಳಗೊಂಡಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‌ ಕೆ ಕಾಂತಾ ಪರಿಚಯ: ಕಲಬುರ್ಗಿಯವರಾದ ಎಸ್‌ ಕೆ ಕಾಂತಾ ಅವರು ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಕಾರ್ಮಿಕರ ಪರವಾಗಿ ಈಗಲೂ ದುಡಿಯುತ್ತಿರುವ ನಾಯಕ. ಕಲಬುರ್ಗಿಯ ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯದ ವಿರುದ್ಧ  ಬಹುದೊಡ್ಡ ಚಳವಳಿಯನ್ನೇ ಮಾಡಿದ್ದರು. ಈಗಲೂ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದಾದ್ಯಂತ ಚಿಂತನಾ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ.  ಮೌಢ್ಯಾಚರಣೆಯ ವಿರುದ್ಧ ಕಾಂತಾ ಅವರು ಜನಜಾಗೃತಿ ಮೂಡಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180