ನಮ್ಮ ಮೆಟ್ರೋ | ಮಾಲಿನ್ಯ ತಡೆಗಟ್ಟಲು ಮತ್ತೆ 'ವರ್ಟಿಕಲ್ ಗಾರ್ಡನ್‌': ಹೆಚ್ಚೇನೂ ಪ್ರಯೋಜನವಿಲ್ಲ ಎನ್ನುತ್ತಿದ್ದಾರೆ ತಜ್ಞರು

  • ಮೆಟ್ರೋ ನಿರ್ಮಾಣಕ್ಕೆ ಕತ್ತರಿಸಿರುವ ಮರಗಳಿಗೆ ಈ ಯೋಜನೆ ಪರ್ಯಾಯವಲ್ಲ
  • 2012 ರಲ್ಲಿ ನಗರದ ಕೆಲವು ಪ್ರದೇಶದಲ್ಲಿ 'ವರ್ಟಿಕಲ್ ಗಾರ್ಡನ್' ನಿರ್ಮಾಣ ಮಾಡಲಾಗಿತ್ತು

ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯವನ್ನು ಕೊಂಚವಾದರೂ ತಪ್ಪಿಸಲು ನಮ್ಮ ಮೆಟ್ರೋ ಪಿಲ್ಲರ್‌ಗಳನ್ನು ‘ವರ್ಟಿಕಲ್ ಗಾರ್ಡನ್’ಗಳಾಗಿ ಪರಿವರ್ತಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಮ್ಆರ್‌ಸಿಎಲ್) ಯೋಜನೆ ರೂಪಿಸಿದೆ. 

2021-22ನೇ ಸಾಲಿನ ಸಾಲಿನ 15 ನೇ ವಾಯು ಗುಣಮಟ್ಟ ಸುಧಾರಣೆ ನಿಧಿಯ ಭಾಗವಾಗಿ ₹140 ಕೋಟಿ ಬಿಡುಗಡೆ ಮಾಡಿತ್ತು. ಬಿಬಿಎಂಪಿ ಮೇಲುರಸ್ತೆಯ ಆಧಾರ ಸ್ತಂಭಗಳು ಮತ್ತು ಬಿಎಂಟಿಸಿ ಬಸ್ ಡಿಪೋಗಳನ್ನು ವರ್ಟಿಕಲ್ ಗಾರ್ಡನ್ ಆಗಿ ರೂಪಿಸಲು ₹5 ಕೋಟಿ ವೆಚ್ಚ ಮಾಡಲಿದೆ.  

Eedina App

ಮೆಟ್ರೊ ಪಿಲ್ಲರ್‌ಗಳು ನಗರದ ಸೌಂದರ್ಯವನ್ನು ಹದಗೆಡಿಸಿವೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 2012 ರಲ್ಲಿ ಎಂ ಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿರುವ ಮೆಟ್ರೋ ಮೇಲುರಸ್ತೆಯ ಆಧಾರ ಸ್ತಂಭಗಳಿಗೆ ಮತ್ತು 'ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ ವೇ' ಅಡಿ ಇದೇ ರೀತಿ ವರ್ಟಿಕಲ್ ಗಾರ್ಡನ್ ನಿರ್ಮಾಣ ಮಾಡಲಾಗಿತ್ತು ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಬಸ್, ನಮ್ಮ ಮೆಟ್ರೋ, ಅಂಗಡಿ ಎಲ್ಲ ಕಡೆಗೂ ಒಂದೇ ಪಾವತಿ ವ್ಯವಸ್ಥೆ; ಬೆಂಗಳೂರಿಗೂ ಬರಲಿದೆ 'ಕಾಮನ್‌ ಮೊಬಿಲಿಟಿ ಕಾರ್ಡ್‌'

AV Eye Hospital ad

ಈಗಾಗಲೇ ಮೆಟ್ರೋ ನಿರ್ಮಾಣ ಮಾಡಲು ಅಧಿಕ ಮರಗಳನ್ನು ಕತ್ತರಿಸಲಾಗಿದೆ. 'ವರ್ಟಿಕಲ್‌ ಗಾರ್ಡನ್‌' ನಿರ್ಮಾಣ ಇದಕ್ಕೆ ಪರ್ಯಾಯವಾಗುವುದಿಲ್ಲ. ಆದರೆ, ಸ್ವಲ್ಪ ಮಟ್ಟಿಗೆ ನೆರವಾಗಬಹುದು ಅಷ್ಟೇ ಎಂದು ಪರಿಸರ ತಜ್ಞರು ಹೇಳಿದರು. 

ವರ್ಟಿಕಲ್ ಗಾರ್ಡನ್‌ಗಳು ಕೇವಲ ಉಸಿರಾಟದ ಕಣಗಳನ್ನು ಹಿಡಿಯುತ್ತವೆ, ಅಷ್ಟೇ. ಆದರೆ, ನಗರದ ಮಾಲಿನ್ಯವನ್ನು ಹೆಚ್ಚೇನೂ ಕಡಿಮೆ ಮಾಡುವುದಿಲ್ಲ. ಎಲೆಗಳ ಪ್ರಮಾಣ ಕಡಿಮೆ ಇರುವುದರಿಂದ ಮಾಲಿನ್ಯ ನಿಯಂತ್ರಿಸುವುದಿಲ್ಲ. ಆದರೂ ನಿಯಮಿತವಾಗಿ 'ವರ್ಟಿಕಲ್ ಗಾರ್ಡನ್‌'ನ ನಿರ್ವಹಣೆ ಮಾಡಿದರೆ ಒಂದಿಷ್ಟು ಪ್ರಯೋಜನ ಆಗುತ್ತದೆ ಎನ್ನುವುದು ಪರಿಸರ ತಜ್ಞರ ಅನಿಸಿಕೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app