'ನಮ್ಮ ಮೆಟ್ರೋ' | ಅ.21ರಿಂದ ವೈಟ್ ಫೀಲ್ಡ್‌-ಐಟಿಪಿಎಲ್ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ

  • ಪ್ರಗತಿಯಲ್ಲಿರುವ ಬೈಯಪ್ಪನಹಳಿ-ವೈಟ್‌ ಫೀಲ್ಡ್‌ ಮಾರ್ಗದ ಮೆಟ್ರೋ ರೈಲು 
  • ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಬಹುದು; ಐಟಿ ಉದ್ಯೋಗಿಗಳು

ವೈಟ್ ಫೀಲ್ಡ್‌ನಿಂದ ಐಟಿಪಿಎಲ್ ಮಾರ್ಗದಲ್ಲಿ "ನಮ್ಮ ಮೆಟ್ರೋ' ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಅ.21 ರಿಂದ ಚಾಲನೆ ನೀಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍‌ಸಿಎಲ್‌) ಮಾಹಿತಿ ನೀಡಿದೆ. 

ಸದ್ಯಕ್ಕೆ ವೈಟ್‌ಫೀಲ್ಡ್‌ನಿಂದ ಐಟಿಪಿಎಲ್ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಪ್ರಾಯೋಗಿಕವಾಗಿ ಸಂಚರಿಸಲು ಆರಂಭಿಸಿದ್ದು, ಅ.25 ರಿಂದ ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಸಂಚರಿಸಲಾಗುವುದು ಎಂದು ಬಿಎಂಆರ್‍‌ಸಿಎಲ್‌ ತಿಳಿಸಿದೆ.

Eedina App

ಬಿಎಂಆರ್‌ಸಿಎಲ್ ಶೀಘ್ರದಲ್ಲಿ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವಿನ ಸುಮಾರು 15 ಕಿ. ಮೀ. 'ನಮ್ಮ ಮೆಟ್ರೋ' ಮಾರ್ಗವನ್ನು ಉದ್ಘಾಟಿಸುವ ಗುರಿ ಹೊಂದಿದೆ. ಜನರು ಸಂಚಾರ ದಟ್ಟಣೆಯಿಂದಾಗಿ ಹೆಚ್ಚು ಪರದಾಡುತ್ತಿದ್ದಾರೆ. ಹೀಗಾಗಿ, ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ ನಂತರ ಮೆಟ್ರೋ ಮಾರ್ಗದಲ್ಲಿ ಕಂಡುಬರುವ ಸಮಸ್ಯೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಅರ್‍‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದೀಪಾವಳಿ | ಸಾರ್ವಜನಿಕರ ಅನುಕೂಲಕ್ಕೆ ಬೆಂಗಳೂರಿನಿಂದ ವಿವಿಧೆಡೆ ವಿಶೇಷ ರೈಲು ವ್ಯವಸ್ಥೆ: ಭಾರತೀಯ ರೈಲ್ವೆ

AV Eye Hospital ad

ನಾಲ್ಕು ವಾರಗಳ ಪ್ರಾಯೋಗಿಕ ಸಂಚಾರದ ಅವಧಿಯಲ್ಲಿ ಮಾರ್ಗದ ನಡುವಿನ ಸಂಚಾರದ ಸಮಯ, ಸಿಗ್ನಲ್, ನಿಲ್ದಾಣದ ಮೂಲ ಸೌಕರ್ಯಗಳು, ಹಳಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರಕ್ಕಾಗಿಯೇ ಆರು ಬೋಗಿಗಳನ್ನು ಬೈಯಪ್ಪನಹಳ್ಳಿ 'ನಮ್ಮ ಮೆಟ್ರೋ' ಡಿಪೋದಿಂದ ತರಿಸಲಾಗಿದೆ. 

ನಾಲ್ಕು ವಾರ ಪ್ರಾಯೋಗಿಕ ಸಂಚಾರ ನಡೆಯಲಿದೆ. ಅದಾದ ನಂತರ ವೈಟ್‌ಫೀಲ್ಡ್‌ನಿಂದ ಐಟಿಪಿಎಲ್ ಮಾರ್ಗದಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಲು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಬಿಎಂಆರ್‍‌ಸಿಎಲ್‌ ಮನವಿ ಮಾಡಿಕೊಂಡಿದೆ. ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಈ  ಮಾರ್ಗದಲ್ಲಿ 'ನಮ್ಮ ಮೆಟ್ರೋ' ಸಂಚಾರಕ್ಕೆ ಮುಕ್ತವಾಗಲಿದೆ.

ಬಹು ನಿರೀಕ್ಷಿತ ಬೈಯಪ್ಪನಹಳಿ-ವೈಟ್‌ ಫೀಲ್ಡ್‌ ಮೆಟ್ರೋ ರೈಲು ನಿರ್ಮಾಣ ಪ್ರಗತಿಯಲ್ಲಿರುವುದನ್ನು ಕಂಡು ಐಟಿ ಕಂಪನಿಯ ಉದ್ಯೋಗಿಗಳು ಟ್ವೀಟ್‌ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಕಡಿಮೆಯಾಗಬಹುದು ಎಂದು ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ.  

ನಿಮಗೆ ಏನು ಅನ್ನಿಸ್ತು?
0 ವೋಟ್
eedina app