ಬೆಂಗಳೂರು | 'ಟೆಲಿ ಮನಸ್' 24 ಗಂಟೆಯೂ ಕಾರ್ಯಾಚರಣೆ ನಡೆಸಲು ಮುಂದಾದ ನಿಮ್ಹಾನ್ಸ್‌

  • ಟೆಲಿ ಮನಸ್ ಸೇವೆ ಪಡೆಯಲು 18008914416 ಕರೆ ಮಾಡಿ
  • ದಿನಕ್ಕೆ 40 ಕರೆ, ಅದರಲ್ಲಿ ಮಕ್ಕಳ ಮಾನಸಿಕ ಸಮಸ್ಯೆಯೇ ಹೆಚ್ಚು

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮನೋರೋಗಿಗಳಿಗಾಗಿ ಹೆಚ್ಚು ಸುಧಾರಣೆಯಾಗುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, 'ಟೆಲಿ ಮನಸ್' ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸಲು ಯೋಜಿಸಿದೆ.

ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳಿಗೆ ‘ಟೆಲಿ ಮನಸ್’ ಸಹಾಯವಾಣಿ ಮೂಲಕ ಸೇವೆ ಒದಗಿಸಲಾಗುತ್ತದೆ. ರಾಜ್ಯದ ಎಲ್ಲೆಡೆಯಿಂದ ದೂರವಾಣಿ ಕರೆಗಳು ಬರುತ್ತಿವೆ. ಟೆಲಿ ಮನಸ್ ಸಹಾಯವಾಣಿ ಬೆಂಗಳೂರಿನ ಧಾರವಾಡದಲ್ಲಿಯೂ ಇದ್ದು, ದಿನವೊಂದಕ್ಕೆ 40 ಕರೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ನಿಮ್ಹಾನ್ಸ್‌ ಸಂಸ್ಥೆ ತಿಳಿಸಿದೆ. 

Eedina App

ಈ ಹಿಂದೆ ನ.10ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ತುರ್ತು ಸಂದರ್ಭದಲ್ಲಿ ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗಿತ್ತು. 'ಟೆಲಿ ಮೆಡಿಸನ್‌' ಅನ್ನು ವಿಸ್ತರಿಸಲು ಯೋಜಿಸಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರಿನಿಂದ ಶಬರಿಮಲೆಗೆ ವಿಶೇಷ ಬಸ್ ಕಾರ್ಯಾಚರಣೆ; ಕೆಎಸ್‌ಆರ್‌ಟಿಸಿ

AV Eye Hospital ad

ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು 'ಟೆಲಿ ಮನಸ್' ಸಹಾಯವಾಣಿಗೆ ಹೆಚ್ಚಾಗಿ ಕರೆಗಳು ಬರುತ್ತಿದೆ. ಓದಿನಲ್ಲಿ ಹಿನ್ನಡೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕರೆಗಳು ಬರುತ್ತಿವೆ. 'ಟೆಲಿ ಮನಸ್' ಸೇವೆ ಪಡೆಯಲು ಈ ಸಂಖ್ಯೆಗೆ ಕರೆ ಮಾಡಬಹುದು 18008914416 ಎಂದು ಸಂಸ್ಥೆ ತಿಳಿಸಿದೆ. 

ಸಹಾಯವಾಣಿಗೆ 40 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಹಾಯವಾಣಿಗೆ ಸಂಪರ್ಕಿಸಿ, ತಜ್ಞರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಬೇಕು. ಕೋವಿಡ್ ಪೀಡಿತರಾದವರಿಗೆ ನಮ್ಮ ಸಿಬ್ಬಂದಿಗಳೇ ದೂರವಾಣಿ ಕರೆ ಮಾಡಿ, ಅಗತ್ಯ ಸಲಹೆ ಸೂಚನೆಯನ್ನು ನೀಡಲಾಗುತ್ತಿದೆ ಎಂದು ನಿಮ್ಹಾನ್ಸ್ ಮಾಹಿತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app