ತೇಜಸ್ವಿಸೂರ್ಯ ಅವಗಿರುವ 'ದ್ವೇಷ ಮನಸ್ಥಿತಿ ತೊಲಗಲಿ' ಎಂದು ಕೆಪಿಸಿಸಿ ವಕ್ತಾರರಿಂದ ಪೂಜೆ

kpcc spoke person
  • ‘ದ್ವೇಷ ಬಿಡಿ ಸಂಸದ ತೇಜಸ್ವಿ ಸೂರ್ಯ’ ಅಭಿಯಾನಕ್ಕೆ ಚಾಲನೆ
  • ಪೂಜೆ ಮಾಡಿಸಿದ ಕೆಪಿಸಿಸಿ ವಕ್ತಾರ ಡಾ ಶಂಕರ್‌ ಗುಹಾ ದ್ವಾರಕನಾಥ್ ಬೆಳ್ಳೂರು

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರಲ್ಲಿರುವ ದ್ವೇಷದ ಭಾವನೆ ತೊಲಗಿ, ಪ್ರೇಮದ ಭಾವನೆ ಮೂಡಲಿ ಎಂದು ಪೂಜೆ ಮಾಡಿಸಿ, ಪೂಜೆಯ ಪಂಚ ಪುಷ್ಪ ಮತ್ತು ಪ್ರಸಾದ ಕಳುಹಿಸುತ್ತಿದ್ದ ವೇಳೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಆರೋಪಿಸಿದ್ದಾರೆ.

ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಅವರ ಕಚೇರಿಯಲ್ಲಿ, ತೇಜಸ್ವಿ ಸೂರ್ಯ ಅವರಿಗೆ ಸಮಾಜದಲ್ಲಿ ಶಾಂತಿ ಕಾಪಡುವಂತಹ ಮನಸ್ಥಿತಿ ಬೆಳೆಯಲಿ ಎಂದು ಪಕ್ಷದ ಕಾರ್ಯಕರ್ತರ ಸಹಯೋಗದೊಂದಿಗೆ ಆಗಸ್ಟ್‌ 9 ರಂದು, ಪಂಚದುರ್ಗಾ ದೇವಿಗೆ ಪೂಜೆ ಸಲ್ಲಿಸಿದ್ದಾರೆ.

“ತೇಜಸ್ವಿ ಸೂರ್ಯ ಮತ್ತು ರವಿ ಸುಬ್ರಹ್ಮಣ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ನಾವು ಪೂಜೆ ಮಾಡಿದ್ದೆವು. ಆದರೆ, ಪೂಜೆಯ ಪ್ರಸಾದ ಕಳುಹಿಸುವಾಗ ಪೊಲೀಸರನ್ನು ಬಳಸಿಕೊಂಡು ಅಡ್ಡಿಪಡಿಸಿದರು. ಅಧಿಕಾರ ಬಳಸಿ ನಮ್ಮನ್ನು ಹೆದರಿಸಿದರು. ಇಂಥ ಬೆದರಿಕೆಗಳಿಗೆ ನಾವು ಜಗ್ಗಲ್ಲ. ನಮಗೆ ಭಯ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಸ್ವಾತಂತ್ರ್ಯೋತ್ಸವಕ್ಕೆ ಸರ್ಕಾರದ ಕೊಡುಗೆ: ಆಗಸ್ಟ್‌ 15ರಂದು ಬಿಎಂಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ

“ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು” ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸಿ,  ಸಂಸದರಿಗೆ ಮತ್ತು ಶಾಸಕರಿಗೆ ಒಳ್ಳೆಯ ಮನಸ್ಥಿತಿಯನ್ನು ದೇವರು ದಯಪಾಲಿಸಲಿ ಎಂದು ಪಂಚದುರ್ಗೆಯ ಜ್ವಾಲೆಯಲ್ಲಿ ದ್ವೇಷ, ಕ್ಲೇಶ, ದುಷ್ಟ ಬುದ್ಧಿ ದೂರವಾಗಲಿ ಎಂದು ಬ್ರಾಹ್ಮೀ ಮುಹೂರ್ತದಲ್ಲಿ ವಿಶೇಷ ಪೂಜೆ ಮಾಡಿದ್ದೇವೆ. ಈ ಮೂಲಕ, ‘ದ್ವೇಷ ಬಿಡಿ ಸಂಸದ ತೇಜಸ್ವಿ ಸೂರ್ಯ’ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದೇವೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್