ನಮ್ಮ ಮೆಟ್ರೋ | ಬೈಯಪ್ಪನ ಹಳ್ಳಿಯಿಂದ ಹೂಡಿ ತನಕ ಪ್ರಾಯೋಗಿಕ ಸಂಚಾರ ಪೂರ್ಣ

  • ಹೂಡಿ ನಿಲ್ದಾಣದವರೆಗೂ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರ ಪೂರ್ಣ
  • ಅ.21ರಂದು ವೈಟ್‌ಫೀಲ್ಡ್‌- ಪಟ್ಟಂದೂರು ಅಗ್ರಹಾರ ನಡುವೆ ಪ್ರಾಯೋಗಿಕ ಸಂಚಾರ 

ವೈಟ್‌ಫೀಲ್ಡ್‌ ಮಾರ್ಗವಾಗಿ, ಬೈಯಪ್ಪನ ಹಳ್ಳಿಯಿಂದ ಹೂಡಿವರೆಗೂ 'ನಮ್ಮ ಮೆಟ್ರೋ' ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ನ.7ರಂದು ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ಮುಂದಿನ ವರ್ಷದೊಳಗೆ ಬೈಯಪ್ಪನ ಹಳ್ಳಿ -ವೈಟ್‌ಫೀಲ್ಡ್‌ ಮಾರ್ಗದ ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದು, ಅದರಂತೆ ಪ್ರಾಯೋಗಿಕ ಸಂಚಾರವನ್ನು ಕೈಗೊಂಡಿದ್ದಾರೆ.

Eedina App

ಈ ಸುದ್ದಿ ಓದಿದ್ದೀರಾ?:ಅಪಾಯಕಾರಿ 'ಸ್ಕೈವಾಕ್' ಮೇಲೆ ಸಾರ್ವಜನಿಕರ ಸಂಚಾರ : ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ನಾಗರಿಕರ ಆಕ್ರೋಶ

ಮೊದಲಿಗೆ ಅ.21ರಂದು ವೈಟ್‌ಫೀಲ್ಡ್‌- ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ನಡುವೆ 3.5 ಕಿ.ಮೀ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿತ್ತು. ಸೋಮವಾರ ಹೂಡಿ ತನಕ 8.3 ಕಿ.ಮೀ ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೋ ರೈಲು, ಗಂಟೆಗೆ 15 ಕಿ.ಮೀ ವೇಗದಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ರೈಲಿನ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಯಿತು.

AV Eye Hospital ad

ಒಟ್ಟು 15.5 ಕಿ.ಮೀ ಮಾರ್ಗದ ಪೈಕಿ 11.8 ಕಿ.ಮೀ ಅಂತರದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. 2023ರ ಜನವರಿ ಕೊನೆಯಲ್ಲಿ ಅಥವಾ ಫೆಬ್ರುವರಿಯಲ್ಲಿ ಬೈಯಪ್ಪನ ಹಳ್ಳಿ- ವೈಟ್‌ಫೀಲ್ಡ್‌ ಮೆಟ್ರೊ ರೈಲು ಸಂಚಾರ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಹೂಡಿವರೆಗೂ ಪ್ರಾಯೋಗಿಕ ಸಂಚಾರ ಆರಂಭವಾಗಿರುವ ಕುರಿತು ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದು, ನೆಟ್ಟಿಗರು ಟ್ವೀಟ್‌ ಮಾಡುವ ಮೂಲಕ ಬಿಎಂಆರ್‌ಸಿಎಲ್‌ ಸೇವೆಯನ್ನು ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಾಗಿರುವ ಸಂಚಾರ ದಟ್ಟಣೆಯಿಂದ ಹೊರ ಬರಲು ಐಟಿ ಕಂಪನಿ ಉದ್ಯೋಗಿಗಳು ಪರ್ಯಾಯ ಮಾರ್ಗವಾದ 'ನಮ್ಮ ಮೆಟ್ರೋ'ಗಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ.

ಹೂಡಿ ಮೆಟ್ರೋ ನಿಲ್ದಾಣದವರೆಗೆ ಗಂಟೆಗೆ 15 ಕಿ.ಮಿ. ವೇಗದಲ್ಲಿ 8.3 ಕಿ.ಮೀ ಒಳಗೊಂಡ ಮೆಟ್ರೋ ರೈಲು ಪರೀಕ್ಷೆಯು ಸೋಮವಾರ ಪೂರ್ಣಗೊಂಡಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app