ಬೆಂಗಳೂರು | ಅ.22ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

  • ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್‌ ಕಡಿತ
  • ವಿದ್ಯುತ್ ಮಾರ್ಗಗಳ ದುರಸ್ತಿ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರಿನ ಕೆಲವು ಭಾಗಗಳಲ್ಲಿ ಶನಿವಾರ (ಅ.22) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಮಾಹಿತಿ ನೀಡಿದೆ.

ವಿದ್ಯುತ್ ಮಾರ್ಗ ಸಂಬಂಧಿತ ಕೆಲಸಗಳು ನಡೆಯುತ್ತಿರುವುದರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

Eedina App

 ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಟಿಕೆಟ್‌ ರಹಿತ ಪ್ರಯಾಣ: 6 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

AV Eye Hospital ad

ರಾಮನಗರ, ಮಲ್ಲೇಶ್ವರಂ, ಹೆಬ್ಬಾಳ, ಜಾಲಹಳ್ಳಿ ಮತ್ತು ಚಂದಾಪುರದಲ್ಲಿ ಪವರ್ ಕಟ್ ಇರಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶ, ಆರ್ ಟಿ ನಗರ, ಗಂಗಾ ನಗರ, ಚೋಳನಗರ, ಹೊರವರ್ತುಲ ರಸ್ತೆ, ಕರಿಯಪ್ಪ ಲೇಔಟ್, ಆಶಾರಾಮ್ ರಸ್ತೆ, 1ನೇ ಬ್ಲಾಕ್ ಆನಂದ ನಗರ, ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ 1ನೇ ಬ್ಲಾಕ್ ನಂದಿದುರ್ಗ, ಮಾರಪ್ಪ ಗಾರ್ಡನ್, ಜೆಸಿ ನಗರ, ಮಿಲ್ಲರ್ಸ್ ರಸ್ತೆ, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೆಟ್ಟಿಹಳ್ಳಿ, ನ್ಯೂ ಬೆಲ್ ರಸ್ತೆ, ದೇವಿನಗರ, ಎಂಎಸ್ ಆರ್ ಇಂಡಸ್ಟ್ರಿಯಲ್ ಎಸ್ಟೇಟ್, ಸಂಜಯನಗರ, ಚಿಕ್ಕಮಾರನಹಳ್ಳಿ, ಹಳೇ ಚಂದಾಪುರ, ನೇರಲೂರು, ಕೀರ್ತಿ ಲೇಔಟ್, ಮುತ್ತಾನಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app