ಬೆಸ್ಕಾಂ | ವಿದ್ಯುತ್ ದುರಸ್ತಿ ಹಿನ್ನಲೆ; ನಗರದಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯ

  • ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯ
  • ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ವಿದ್ಯುತ್ ಕಡಿತ 

ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತ ನಿಗಮ (ಬೆಸ್ಕಾಂ) ನ.29 ಮತ್ತು ನ.30ರಂದು ನಗರದ ಹಲವೆಡೆ ವಿದ್ಯುತ್ ದುರಸ್ತಿ ಕಾರ್ಯವನ್ನು, ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಮಾರ್ಗ ಸಂಬಂಧಿತ ಕೆಲಸಗಳು, ಗ್ಯಾಪ್ ಕ್ರಾಸಿಂಗ್, ಇಂಟರ್‌ ಲಿಂಕಿಂಗ್ ಹಾಗೂ ಜಲಸಿರಿ ನೀರು ಸರಬರಾಜು ಕಾಮಗಾರಿಗಳನ್ನು ಆರಂಭಿಸುತ್ತಿರುವ ಕಾರಣ, ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Eedina App

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಅಪಘಾತಗಳ ಹೆಚ್ಚಳ; ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

ನ.29ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

AV Eye Hospital ad

ಕೋರಮಂಗಲ, ಯಲಹಂಕ, ಅರುಣಾ ಥಿಯೇಟರ್,  ಸಿತಾರಾ ಹೋಟೆಲ್, ಬೆಳ್ಳಂದೂರು, ದೇವರಬೀಸನಹಳ್ಳಿ, ಕರಿಯಮ್ಮನಪಾಳ್ಯ, ಟೋಟಲ್ ಮಾಲ್, ಚಿಕ್ಕೇನಹಳ್ಳಿ, ಮಲ್ಲಘಟ್ಟ, ಚೆಂಡೂರು, ಕಲ್ಕೆರೆ, ಲೊಕ್ಕಮ್ಮನಹಳ್ಳಿ, ತೊರೆಮಾವ್ನಹಳ್ಳಿ, ಹುಲಿಕೆರೆ, ಗೊಟ್ಟಿಕೆರೆ, ತುಮಕೂರು ಮತ್ತು ತಾವರೆಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. 

ನ.30ರಂದು ಎಲ್ಲೆಲ್ಲಿ ವಿದ್ಯುತ್ ಕಡಿತ?

ಕನಕಪುರ, ಬಸವನಗುಡಿ ದೇವಸ್ಥಾನದ ಸುತ್ತಮುತ್ತ ಪ್ರದೇಶಗಳು, ಸೋಮನಹಳ್ಳಿ, ಟಿಕೆ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳು, ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ತೇಜಸ್ವಿನಿ ನಗರ ಹಾಗೂ ಮತ್ತಿತ್ತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app