ಬೆಸ್ಕಾಂ | ದುರಸ್ತಿ ಕಾರ್ಯದ ಹಿನ್ನೆಲೆ; ಎರಡು ದಿನ ನಗರದಲ್ಲಿ ವಿದ್ಯುತ್ ವ್ಯತ್ಯಯ

  • ಸ್ಮಾರ್ಟ್‌ ಸಿಟಿ, ಜಲಸಿರಿ ನೀರು ಸರಬರಾಜು ಕಾಮಗಾರಿ ಆರಂಭ
  • ಬೆಳಿಗ್ಗೆ 10 ರಿಂದ 4 ಗಂಟೆವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತ ನಿಗಮ ನ.15 ಮತ್ತು 16ರವರೆಗೂ ಬಾಕಿ ಉಳಿದ ವಿದ್ಯುತ್ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸ್ಮಾರ್ಟ್‌ ಸಿಟಿ ಕಾಮಗಾರಿ, ಜಲಸಿರಿ ನೀರು ಸರಬರಾಜು ಕಾಮಗಾರಿ ಆರಂಭಿಸುತ್ತಿರುವ ಕಾರಣ ಬೆಳಿಗ್ಗೆ 10 ರಿಂದ 4 ಗಂಟೆವರೆಗೂ ನಗರದ ಹಲವು ಭಾಗಗಳಲ್ಲಿ ಎರಡು ದಿನ ವಿದ್ಯುತ್ ಕಡಿತಗೊಳ್ಳಲಿದೆ

ನ.15ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?

ರಾಮನಗರ ಮುಖ್ಯರಸ್ತೆ, ಕೋರ್ಟ್ ರಸ್ತೆ, ರತ್ನಮ್ಮ ಹಾಸ್ಟೆಲ್, ಮುಸ್ಲಿಂ ಕಾಂಪ್ಲೆಕ್ಸ್, ಹಳೆ ಬಸ್ ನಿಲ್ದಾಣ, ಮಹಿಳಾ ಕಾಂಪ್ಲೆಕ್ಸ್, ಶಾಂತಿ ಕಂಫರ್ಟ್ಸ್, ಅರುಣಾ ಥಿಯೇಟರ್, ಸಿತಾರಾ ಹೋಟೆಲ್ ಮತ್ತಿತ್ತರ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ವೇತನಕ್ಕಾಗಿ ಆರೋಗ್ಯಸೌಧದ ಎದುರು '108 ಆ್ಯಂಬುಲೆನ್ಸ್' ಸಿಬ್ಬಂದಿ ಪ್ರತಿಭಟನೆ

ನ.16 ರಂದು ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ

ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜಪೇಟೆ ಸರ್ಕಲ್, ಕ್ಲಾಕ್ ಟವರ್, ಮಹಾವೀರ್ ರಸ್ತೆ, ರಾಮನಗರ ಮುಖ್ಯ ರಸ್ತೆ, ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್ಎನ್ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್ನ್ಯಾಷನಲ್ ಹೋಟೆಲ್, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಗಿರಿಯಪ್ಪ ಲೇಔಟ್ ಮತ್ತು ಜಿಎಂಐಟಿ ಕಾಲೇಜು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app