ಬೆಂಗಳೂರು | ಜನಪ್ರತಿನಿಧಿಗಳು, ಅಧಿಕಾರಿಗಳ ಹೊಣೆಗೇಡಿತನ; ರಜಾ ದಿನದಂದು ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿಗಳು!

  • ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದ ನೆಟ್ಟಿಗರು
  • ರಜೆ ಸಮಯದಲ್ಲಿ ಶಾಲಾ ಮಕ್ಕಳಿಂದ ಸಾಮಾಜಿಕ ಕಳಕಳಿ 

ಬೆಂಗಳೂರಿನಲ್ಲಿರುವ ರಸ್ತೆಗುಂಡಿಗಳ ಕಾರಣಕ್ಕೆ ಹೆಚ್ಚಾಗುತ್ತಿರುವ ಅಪಘಾತಗಳಿಂದ ಬೇಸತ್ತ ಶಾಲಾ ವಿದ್ಯಾರ್ಥಿಗಳು ರಜೆ ದಿನವಾದ ಭಾನುವಾರ ಬನ್ನೇರುಘಟ್ಟದ ಕಗ್ಗಲೀಪುರದ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.  

ಕಗ್ಗಲೀಪುರದ ಉದ್ದಕ್ಕೂ ಇರುವ ಅನೇಕ ರಸ್ತೆಗುಂಡಿಗಳನ್ನು ರಜಾ ದಿನ ಶಾಲಾ ಮಕ್ಕಳು ಸಿಮೆಂಟ್, ಮರಳನ್ನು ಹಾಕಿ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಹಾಕಿ ವಾಹನ ಸವಾರರ ಜೀವ ಉಳಿಸುವ ಕಾರ್ಯವನ್ನು ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. 

Eedina App

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ರಸ್ತೆ ಗುಂಡಿಗಳ ನಡುವೆಯೂ ಸುಗಮವಾಗಿ ಸಂಚರಿಸುತ್ತಂತೆ ಈ ಎಸ್‌ಯುವಿ ಬೈಕ್!

ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಗಡುವನ್ನು ಹಲವು ಬಾರಿ ವಿಸ್ತರಿಸಿಕೊಂಡು ಕಾಲಹರಣ ಮಾಡುತ್ತಿದೆ. ಆದಕಾರಣ ರಸ್ತೆ ಗುಂಡಿಗಳಿಂದಾಗುವ ಅವಘಡಗಳಿಂದ ಸಾವು ನೋವು ತಪ್ಪಿಸಲು ಶಾಲಾ ವಿದ್ಯಾರ್ಥಿಗಳು ತಮ್ಮ ಆಟದ ಸಮಯವನ್ನು ಗುಂಡಿ ಮುಚ್ಚುವ ಕಾರ್ಯಕ್ಕೆ ವ್ಯಯಿಸಿದ್ದಾರೆ. ಸ್ಥಳೀಯರು ಮಕ್ಕಳ ಈ ಕಾರ್ಯಕ್ಕೆ ಬೆಂಬಲ ನೀಡಿದ್ದು, ಸದ್ಯ ಮಕ್ಕಳು ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿ ಬಿಬಿಎಂಪಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ.

AV Eye Hospital ad

ಈ ಕುರಿತು ಟ್ವೀಟ್ ಮಾಡಿರುವ ನೆಟ್ಟಿಗ ಕುಮಾರ್ “ರಸ್ತೆ ಗುಂಡಿಯಿಂದಾಗಿ ಅದೆಷ್ಟೋ ಮಕ್ಕಳು ತಂದೆ ತಾಯಿ ಕಳೆದು ಕೊಂಡು ಅನಾಥರಾಗಿದ್ದಾರೆ. ಅದನ್ನು ತಪ್ಪಿಸಲು ಶಾಲಾ ಮಕ್ಕಳು ಈ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾವ ಮಕ್ಕಳೂ ಅನಾಥರಾಗಲು ಇಚ್ಛಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಾಲಿಕೆ ಅಧಿಕಾರಿಗಳೇ ನಿಮ್ಮ ಭ್ರಷ್ಟಾಚಾರದಿಂದ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ" ಎಂದು ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app