ಬಿಬಿಎಂಪಿ| ದಕ್ಷಿಣ ವಲಯದಲ್ಲಿ ರೇಬಿಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮ

  • ಭಿತ್ತಿಪತ್ರಗಳನ್ನು ಹಂಚುವ ಮೂಲಕ ರೇಬಿಸ್ ರೋಗದ ಬಗ್ಗೆ ಅರಿವು
  • ಆರೋಗ್ಯಾಧಿಕಾರಿ ಡಾ.ಸುರೇಶ್ ಜಿ ಕೆ ಅಧ್ಯಕ್ಷತೆಯಲ್ಲಿ ಜಾಥಾ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರೇಬಿಸ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ಮೂಲನೆಗೆ ದಕ್ಷಿಣ ವಲಯದ ಹೆಚ್.ಸಿದ್ದಯ್ಯ ರಸ್ತೆ, ರೆಫರಲ್ ಆಸ್ಪತ್ರೆ ವ್ಯಾಪ್ತಿಯಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಜಾಥಾವನ್ನು ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಸುರೇಶ್ ಜಿ ಕೆ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ್, ಡಾ. ಮಧುಸೂದನ್, ಡಾ. ಕೋಮಲ, ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಯ ಅರೆ ವೈದ್ಯಕೀಯ ತರಬೇತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Eedina App

ಜಾಥಾ ಹೆಚ್ ಸಿದ್ದಯ್ಯ ರಸ್ತೆ, ರೆಫರಲ್ ಆಸ್ಪತ್ರೆಯಿಂದ ಪ್ರಾರಂಭವಾಗಿ ಊರ್ವಶಿ ಚಿತ್ರಮಂದಿರ, ಲಾಲ್‌ಬಾಗ್ ವೃತ್ತದ ಮೂಲಕವಾಗಿ ಮಿನರ್ವ ಸರ್ಕಲ್‌ವರೆಗೆ ವಿದ್ಯಾರ್ಥಿಗಳಿಂದ ರೇಬಿಸ್ ರೋಗದ ಬಗ್ಗೆ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಅರಿವು ಮೂಡಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಗೊಂಬೆ ಹಬ್ಬ'; ಪ್ರಯಾಣಿಕರ ಸಂತಸ

AV Eye Hospital ad

ವಿಶ್ವ ರೇಬಿಸ್ ದಿನ

ಸರ್ ಲೂಯಿಸ್ ಪಾಶ್ಚರ್ ಅವರ ಸ್ಮರಣಾರ್ಥವಾಗಿ ಅವರು ಮರಣ ಹೊಂದಿದ ದಿನದಂದು ವಿಶ್ವ ರೇಬಿಸ್ ದಿನವಾಗಿ ಪ್ರತಿವರ್ಷ ಸೆಪ್ಟೆಂಬರ್ 28ರಂದು ಆಚರಿಸಲಾಗುತ್ತದೆ. ರೇಬಿಸ್ ಲಸಿಕೆಯನ್ನು ಮೊದಲು ಅಭಿವೃದ್ಧಿಪಡಿಸಿ, ರೇಬಿಸ್ ಬಗ್ಗೆ ಸರ್ ಲೂಯಿಸ್ ಪಾಶ್ಚರ್ ಜಾಗೃತಿ ಮೂಡಿಸಿದ್ದರು.

ಪ್ರಾಣಿಗಳ ಕಡಿತದ ಮೂಲಕ ಮನುಷ್ಯರಿಗೆ ರೇಬಿಸ್ ಖಾಯಿಲೆ ಬರುತ್ತದೆ. ಇದು ಮಾರಣಾಂತಿಕ ಖಾಯಿಲೆಯಾಗಿದೆ. ನಾಯಿಗಳಿಗೆ ನಿಯಮಿತವಾಗಿ ಹಾಗೂ ವ್ಯವಸ್ಥಿತವಾಗಿ ಲಸಿಕೆ ಹಾಕುವುದರಿಂದ ಇದನ್ನು ಶೇ.100 ರಷ್ಟು ತಡೆಗಟ್ಟಬಹುದು.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ 2030ರ ವೇಳೆಗೆ ಜಾಗತಿಕವಾಗಿ ನಾಯಿಗೆ ಸಂಬಂಧಪಟ್ಟ ಮಾನವ ರೇಬಿಸ್‌ನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app