ಜೆಡಿ ಗಾರ್ಡನ್ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ: ಒಂಬತ್ತು ಮಂದಿ ವಿರುದ್ಧ ಎಫ್ಐಆರ್

  • ರೇವ್ ಪಾರ್ಟಿಯಲ್ಲಿ ಪ್ರಭಾವಿ ವ್ಯಕ್ತಿಗಳ ಪುತ್ರರು ಭಾಗಿ
  • ಏರ್‌ಪೋರ್ಟ್ ಠಾಣೆಯಿಂದ ಚಿಕ್ಕಜಾಲ ಠಾಣೆಗೆ ಪ್ರಕರಣ ವರ್ಗಾವಣೆ

ಬೆಂಗಳೂರು ಹೊರವಲಯದ ಸಾದಹಳ್ಳಿಯ ಜೆಡಿ ಗಾರ್ಡನ್ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ರೆಸಾರ್ಟ್ ಮಾಲೀಕ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೆಐಎಎಲ್ ಏರ್‌ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿರುವ ಜೆಡಿ ಗಾರ್ಡನ್ ರೆಸಾರ್ಟ್‌ನಲ್ಲಿ ಸೆಪ್ಟೆಂಬರ್ 6ರಂದು ರೇವ್ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಪ್ರಭಾವಿ ಗಣಿ ಉದ್ಯಮಿ ಪುತ್ರ ಮತ್ತು ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿಯಾಗಿದ್ದರು ಎನ್ನಲಾಗಿದೆ. 

Eedina App

ದಾಳಿ ವೇಳೆ ರೆಸಾರ್ಟ್‌ನಲ್ಲಿ ವಿದೇಶ ಮತ್ತು ಹೊರ ರಾಜ್ಯದ ಯುವತಿಯರು ಇದ್ದರು. ಆ ಯುವತಿಯರ ಬಳಿ ವೀಸಾ, ಪಾಸ್ ಪೋರ್ಟ್ ಇರಲಿಲ್ಲ. ಈ ಸಂಬಂಧ ಮಾನವ ಕಳ್ಳಸಾಗಣೆ ಕಾಯ್ದೆಯಡಿ ಜೆಡಿ ಗಾರ್ಡನ್ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯ ಸೇರಿದಂತೆ ಒಂಬತ್ತು ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿದ ನಂತರ ಠಾಣಾ ವ್ಯಾಪ್ತಿಯನ್ನು ಕೆಐಎಎಲ್ ಏರ್ಪೋರ್ಟ್ ಠಾಣೆಯಿಂದ ಚಿಕ್ಕಜಾಲ ಠಾಣಾ ವ್ಯಾಪ್ತಿಗೆ ಬದಲಾವಣೆ ಮಾಡಲಾಗಿದೆ. ರೇವ್ ಪಾರ್ಟಿಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರೂ ಕೇವಲ ಒಂಬತ್ತು ಮಂದಿ ವಿರುದ್ಧ ಮಾತ್ರವೇ ಕೇಸು ದಾಖಲಾಗಿದೆ. ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರನನ್ನು ಪ್ರಕರಣದಿಂದ ತಪ್ಪಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಟೋವಿಂಗ್ ಅವಶ್ಯಕತೆ ಕುರಿತು ಪರಿಶೀಲನೆ: ಪ್ರತಾಪ್ ರೆಡ್ಡಿ

ಸ್ಯಾಂಡಲ್‌ವುಡ್ ಡ್ರಗ್ ಕೇಸ್ ನಲ್ಲಿ ಬಂಧಿತನಾಗಿದ್ದ ಆರೋಪಿ, ಜೆಡಿ ಗಾರ್ಡನ್ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯಂ ಕೂಡ ಈ ಪ್ರಕರಣದ ಅರೋಪಿ. ಈ ಹಿಂದೆ ಆತನ ಬಳಿ ಅಪಾರ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಸಿಸಿಬಿ ಪೊಲೀಸರು ಜೇಡ್ -735 ವಿಲ್ಲಾ ಮೇಲೆ ದಾಳಿ ಮಾಡುತ್ತಿದ್ದಂತೆ ಶ್ರೀನಿವಾಸ್ ಸುಬ್ರಮಣ್ಯಂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app