ಒಂದು ನಿಮಿಷದ ಓದು| ರಾಜಗೋಪಾಲನಗರದಲ್ಲಿ 2,856 ಕೆಜಿ ಪ್ಲಾಸ್ಟಿಕ್ ಜಪ್ತಿ, 50 ಸಾವಿರ ದಂಡ

ಪ್ಲಾಸ್ಟಿಕ್‌ ನಿಷೇಧದ ಹಿನ್ನೆಲೆಯಲ್ಲಿ ಬಿಬಿಎಂಪಿ ತಂಡ, ದಾಸರಹಳ್ಳಿ ವಲಯ ವ್ಯಾಪ್ತಿಯದ ರಾಜಗೋಪಾಲನಗರದಲ್ಲಿ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯ ಮೇಲೆ ದಾಳಿ ನಡೆಸಿದೆ.

'ಬೆಂಗಳೂರು ಪ್ಲಾಸ್ಟಿಕ್ ಕಾರ್ಖಾನೆ' ಮೇಲಿನ ದಾಳಿ ವೇಳೆ, 2,856 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ವಶಪಡಿಸಿಕೊಂಡು ₹50 ಸಾವಿರ ದಂಡ ವಿಧಿಸಲಾಗಿದೆ.

ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ಅನ್ನು ಪರಿಶೀಲಿಸಿ, ಚೂರು ಚೂರು ಮಾಡಿ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿ ಮಾಡಲು ವಲಯ ಆಯುಕ್ತರು ಸೂಚನೆ ನೀಡಿದರು.

ಪರಿಶೀಲನೆ ವೇಳೆ ದಾಸರಹಳ್ಳಿ ವಲಯದ ವಲಯ ಆಯುಕ್ತರು, ಕೇಂದ್ರ ಕಚೇರಿ ಜಂಟಿ ಆಯುಕ್ತರು(ಘನ ತ್ಯಾಜ್ಯ ನಿರ್ವಹಣೆ), ದಾಸರಹಳ್ಳಿ ವಲಯದ ಜಂಟಿ ಆಯುಕ್ತರು, ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧೀಕ್ಷಕ ಅಭಿಯಂತರರು ಸೇರಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್