ಒಂದು ನಿಮಿಷದ ಓದು | ಬೆಂಗಳೂರಿನಲ್ಲಿ ಆಟೋ ಬೆನ್ನೇರಿದ '40% ಸರ್ಕಾರ'

ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ‘ಪೇ ಸಿಎಂ’ ಅಭಿಯಾನ ಆರಂಭವಾಗಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಈ ಅಭಿಯಾನವೀಗ ಇನ್ನೊಂದು ಆಯಾಮಕ್ಕೆ ತಿರುಗಿದೆ. ನಗರದಲ್ಲಿ ಶುಕ್ರವಾರ ಕೆಲವು ಆಟೋಗಳ ಮೇಲೆ ‘40% ಸರ್ಕಾರ’ ಭ್ರಷ್ಟಾಚಾರದ ವಿರುದ್ಧ ನಿಮ್ಮ ಧ್ವನಿ ಎತ್ತಿ' ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಈ ಮೂಲಕ '40% ಸರ್ಕಾರ' ಅಭಿಯಾನ ಬೆಂಗಳೂರಿನ ಹೊರವಲಯಕ್ಕೂ ವ್ಯಾಪಿಸಿದ್ದು, ನೆಲಮಂಗಲದ ಕೆಲವು ಆಟೋಗಳ ಮೇಲೂ ಪೋಸ್ಟರ್ ಅಂಟಿಸಲಾಗಿದೆ.

'ರಾಜ್ಯದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ' ಎಂದು ಆಟೋಗಳ ಮೇಲೆ 844 770 40 40 ಟೋಲ್ ಫ್ರೀ ದೂರವಾಣಿ ಸಂಖ್ಯೆ ಹಾಕಲಾಗಿದೆ. www.40percentsarakara.com ವೆಬ್‌ಸೈಟ್ ಮತ್ತು ಕ್ಯೂಆರ್ ಕೋಡ್‌ನ ಪೋಸ್ಟರ್ ಅನ್ನು ಆಟೋಗಳ ಮೇಲೆ ಹಾಕಲಾಗಿದೆ.

'40% ಸರ್ಕಾರ'ದ ಅಭಿಯಾನ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. 

AV Eye Hospital ad

ಈ 844 770 40 40 ಸಂಖ್ಯೆಗೆ ಮಾಡಿದ ನಂತರ ಕಾಲ್ ಕಟ್‌ ಆಗಿ, ಮತ್ತೋಂದು ಸಂಖ್ಯೆಯಿಂದ ಕರೆ ಬರುತ್ತದೆ. '40% ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಏರಿಸಲು ತಯಾರಾಗಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿ, ನಂತರ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಹೇಳಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app