ಒಂದು ನಿಮಿಷದ ಓದು | ಆಗಸ್ಟ್‌ 10 ರಿಂದ 13ರವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ: ಬೆಸ್ಕಾಂ

ಬೆಂಗಳೂರಿನ ಹಲವೆಡೆ ವಿದ್ಯುತ್ ತಂತಿಗಳ ಬದಲಾವಣೆ ಹಾಗೂ ನೆಲ ಮಾರ್ಗದಲ್ಲಿ ಕೇಬಲ್‌ಗಳ ಅಳವಡಿಕೆ ಸೇರಿದಂತೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್‌ 10ರಿಂದ 13ರವರೆಗೆ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಆಗಸ್ಟ್‌ 10ರಂದು ವಿದ್ಯುತ್ ಸಮಸ್ಯೆ ಎಲ್ಲಿ?

ಬೆಂಗಳೂರಿನ ಜಕ್ಕಸಂದ್ರ, ಎಚ್ ಎಸ್ ಆರ್ 5 ನೇ ಸೆಕ್ಟರ್, ಟೀಚರ್‍ಸ್‌ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಾಲರ್ಪುರಿಯ ಗ್ರೀನೇಜ್ ಅಪಾರ್ಟ್‌ಮೆಂಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿ ಕಾಮಗಾರಿ ಮಾಡಲಾಗುತ್ತದೆ. ಈ ಭಾಗದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಆಗಸ್ಟ್‌ 11 ರಿಂದ 13ರವರೆಗೆ ಎಲ್ಲಿ ವಿದ್ಯುತ್ ವ್ಯತ್ಯಯ?

ಎಲೆಕ್ಟ್ರಾನಿಕ್‌ ಸಿಟಿ ಹಂತ 2, ವೀರಸಂದ್ರ, ಅನಂತನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್