ಒಂದು ನಿಮಿಷದ ಓದು | ಬೆಂಗಳೂರಿನಲ್ಲಿ 225 ಮಂದಿಗೆ ಸೋಂಕು; ಕೋವಿಡ್ ಪಾಸಿಟಿವಿಟಿ ದರ ಶೇ.5.31

Covid

ಬೆಂಗಳೂರಿನಲ್ಲಿ ಬುಧವಾರ 225 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 5.31 ದಾಖಲಾಗಿದೆ. 224 ಮಂದಿ ಗುಣಮುಖರಾಗಿದ್ದು, ಸೋಂಕಿನಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಪ್ರಸ್ತುತವಾಗಿ 1,584 ಸಕ್ರಿಯ ಸೋಂಕು ಪ್ರಕರಣಗಳಿವೆ. ಇದರಲ್ಲಿ 11 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದವರು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 527 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, 37 ಮಂದಿ ಮೊದಲ ಡೋಸ್, 217 ಮಂದಿ ಎರಡನೇ ಡೋಸ್ ಮತ್ತು 273 ಮಂದಿ ಮೂರನೇ ಡೋಸ್ ಕೊವೀಡ್ ಲಸಿಕೆ ಪಡೆದಿದ್ದಾರೆ.

Eedina App

ನಗರದಲ್ಲಿ 1,963 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1,754 ಮಂದಿಗೆ ಆರ್‍‌ಟಿಪಿಸಿಆರ್ ಹಾಗೂ 209 ಮಂದಿಗೆ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app