ಒಂದು ನಿಮಿಷದ ಓದು | ಆ. 20ರಂದು ಮೂರನೇ ವಿದ್ಯುತ್‌ ಅದಾಲತ್‌: ಬೆಸ್ಕಾಂ

ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳ 88 ಹಳ್ಳಿಗಳಲ್ಲಿ ಶನಿವಾರ(ಆ.20)ದಂದು ಮೂರನೇ ವಿದ್ಯುತ್ ಅದಾಲತ್ ನಡೆಯಲಿದೆ.

ಪ್ರತಿ ತಿಂಗಳ ಮೂರನೇ ಶನಿವಾರದಂದು ನಡೆಯುವ ಅದಾಲತ್‌ನಲ್ಲಿ ಬೆಸ್ಕಾಂ ನಿಗಮ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಗ್ರಾಹಕರ ಅಹವಾಲುಗಳನ್ನು  ಸ್ವೀಕರಿಸಲಿದ್ದಾರೆ. 

ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ದಾವಣಗೆರೆಯ ಕುಕ್ಕುವಾಡ ಮತ್ತು ಬೆಸ್ಕಾಂನ ನಿರ್ದೇಶಕ(ತಾಂತ್ರಿಕ) ಡಿ ನಾಗಾರ್ಜುನ ಅವರು ಮಳಕಾಲ್ಮೂರು ತಾಲೂಕಿನ ಕಣಕುಟ್ಟೆಯಲ್ಲಿ ನಡೆಯಲಿರುವ ವಿದ್ಯುತ್ ಅದಾಲತ್‌ನಲ್ಲಿ ಭಾಗವಹಿಸಲಿದ್ದಾರೆ.

ಇಂಧನ ಸಚಿವ ಸುನೀಲ್ ಕುಮಾರ್ ಅವರ ಸೂಚನೆ ಮೇರೆಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್‌ ಅದಾಲತ್‌ ಆಯೋಜಿಸಲಾಗುತ್ತಿದ್ದು, ಇದುವರೆಗೆ ಎರಡು ವಿದ್ಯುತ್ ಅದಾಲತ್‌ಗಳನ್ನು ಆಯೋಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್