ಹಾಲಿನ ದರ ಏರಿಕೆಯಾದರೂ, ಉಪಾಹಾರ ದರ ಹೆಚ್ಚಳವಿಲ್ಲ : ಹೋಟೆಲ್ ಮಾಲೀಕರ ಸಂಘ

ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಾಹಾರದ ದರದಲ್ಲಿ ಏರಿಕೆ ಮಾಡಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.

ಹಾಲಿನ ದರ ಏರಿಕೆಯಾದ ಬೆನ್ನಲ್ಲೇ, ಈ ಕುರಿತು ಹೇಳಿಕೆ ನೀಡಿದ ಅವರು, “ಕೆಎಂಎಫ್‌ನವರು ನಂದಿನಿ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಿದ್ದಾರೆ. ಈಗ ಪ್ರತಿ ಲೀಟರ್ ಹಾಲಿನ ದರ ₹2 ಏರಿಕೆ ಮಾಡಲಾಗಿದೆ. ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಾಹಾರ ದರ ಹಾಗೂ ಕಾಫಿ, ಟೀ ಬೆಲೆ ಏರಿಕೆ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ನೋಡಿ. ಚರ್ಚೆ ಮಾಡುತ್ತೇವೆ. ಆ ಬಳಿಕ ಮಾಹಿತಿ ನೀಡುತ್ತೇವೆ" ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180