ಒಂದು ನಿಮಿಷದ ಓದು| 30 ದಿನಗಳವರೆಗೂ ಯಶವಂತಪುರ ಸಿ ವಿ ರಾಮನ್‌ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಶವಂತಪುರದ ಸಿ ವಿ ರಾಮನ್ ರಸ್ತೆಯಲ್ಲಿ ಆಗಸ್ಟ್‌ 18ರಿಂದ ವೈಟ್‌ ಟಾಪಿಂಗ್ ಕಾಮಗಾರಿ ಕೈಗೊಳ್ಳಲಿದ್ದು, ಈ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸದಂತೆ ನಿರ್ಬಂಧ ಹೊರಡಿಸಿದ್ದಾರೆ.

ಮಲ್ಲೇಶ್ವರ 18ನೇ ಅಡ್ಡರಸ್ತೆಯಿಂದ ಬರುವ ವಾಹನಗಳು ಸರ್ಕಲ್ ಮಾರಮ್ಮ ದೇವಸ್ಥಾನ, ಮಾರ್ಗೋಸಾ ರಸ್ತೆ, 15ನೇ ಅಡ್ಡರಸ್ತೆ ಹಾಗೂ ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸ್ದಾರೆ.

ಮೇಖ್ರಿ ವೃತ್ತದಿಂದ ಬರುವ ವಾಹನಗಳು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್, ಕುವೆಂಪು ವೃತ್ತ, ಬಿಇಎಲ್ ವೃತ್ತದ ಮೂಲಕ ಹೋಗಬಹುದಾಗಿದೆ.

ಜಯಮಹಲ್, ಕಂಟೋನ್ಮೆಂಟ್, ಮಲ್ಲೇಶ್ವರಂ, ಸದಾಶಿವನಗರ, ರಾಜಾಜಿನಗರ ಯಶವಂತಪುರ ಕಡೆಗೆ ಅಧಿಕ ಮಂದಿ ವಾಹನ ಸವಾರರು ಸಂಚರಿಸಲಿದ್ದು, ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಬದಲಿ ಮಾರ್ಗಗಳನ್ನು ಬಳಸಬೇಕೆಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್