ಒಂದು ನಿಮಿಷದ ಓದು | ಬೆಂಗಳೂರಿಗೆ ಬರಲಿದೆ ವಿಶಾಲ ಪ್ರಯಾಣಿಕ ಎ–380 ವಿಮಾನ

emirates jumbo jet

ಅಕ್ಟೋಬರ್ 30ರಿಂದ ಬೆಂಗಳೂರಿಗೆ ಬರಲಿದೆ 79.8 ಮೀಟರ್ ಉದ್ದದ 'ಎಮಿರೇಟ್ಸ್ ಜಂಬೊ ಜೆಟ್' ವಿಮಾನ. ದುಬೈನಿಂದ ನೇರವಾಗಿ ಬೆಂಗಳೂರಿಗೆ ಎ– 380 ವಿಮಾನ ಬರಲಿದೆ ಎಂದು ಎಮಿರೇಟ್ಸ್ ಸಂಸ್ಥೆ ಖಚಿತಪಡಿಸಿದೆ.

ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಎ–380 ವಿಮಾನ ದುಬೈನಿಂದ ಅಕ್ಟೋಬರ್ 30ರ ರಾತ್ರಿ ಹೊರಟು ಬೆಂಗಳೂರಿಗೆ ಬೆಳಗಿನ ಜಾವ 2.30ಕ್ಕೆ ಬರಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡ್ ‘ಎಫ್’ಗೆ ಅನುಗುಣವಾಗಿ ಈ ವಿಮಾನ ಇಳಿಸುವ ರನ್‌ವೇ ಅಣಿಗೊಳಿಸಲಾಗುತ್ತಿದೆ.

ಎ-380 ಡಬಲ್ ಡೆಕರ್ ವಿಮಾನವಾಗಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಜನ ಪ್ರಯಾಣಿಸಬಹುದು. ಮುಂಬೈ ಮತ್ತು ದೆಹಲಿ ಬಿಟ್ಟರೆ ಜಂಬೊ ಜೆಟ್ ವಿಮಾನ ಸಂಚಾರಕ್ಕೆ ಬೆಂಗಳೂರು ಮೂರನೇ ನಗರವಾಗಿದೆ.

ಜಂಬೋ ಜೆಟ್ ವಿಮಾನದಲ್ಲಿ ಮೂರು ವಿಧದ ಟಿಕೆಟ್ ವ್ಯವಸ್ಥೆ ರೂಪಿಸಲಾಗಿದೆ. ಮೊದಲೆಯದು, ಪ್ರೀಮಿಯಂ ಕ್ಲಾಸ್, ಎರಡನೆಯದು, ಬ್ಯುಸಿನೆಟ್ ಕ್ಲಾಸ್, ಮೂರನೆಯದು, ಎಕನಾಮಿ ಕ್ಲಾಸ್ ಸೀಟ್ ವ್ಯವಸ್ಥೆ ಹೊಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್