- 'ಇರುವ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸದೆ, ಮತ್ತೊಂದು ಶಾಲೆ ನಿರ್ಮಾಣ ಸರಿಯಲ್ಲ'
- ನ.15ರಂದು ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ
ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಳಿ ಇರುವ ಕೆಂಪೇಗೌಡ ಆಟದ ಮೈದಾನದಲ್ಲಿ ಸರ್ಕಾರಿ ಶಾಲೆ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಅದನ್ನು ಕೈಬಿಡಬೇಕೆಂದು ಭಾನುವಾರ ಪ್ರತಿಭಟನೆ ನಡೆಸಿದರು.
ಬಿಇಎಂಎಲ್ ಬಡಾವಣೆ 155 ಎಕರೆ ಪ್ರದೇಶದಲ್ಲಿ ವಸತಿ ಪ್ರದೇಶವಿದ್ದು, ಈ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲೂ ಸರ್ಕಾರಿ ಆಟದ ಮೈದಾನ ಇಲ್ಲ. 1.6 ಎಕರೆ ವಿಸ್ತೀರ್ಣದಲ್ಲಿರುವ ಕೆಂಪೇಗೌಡ ಆಟದ ಮೈದಾನ ಒಂದೇ ಏಕೈಕ ಜಾಗವಾಗಿದೆ. ಇದನ್ನೂ ಕಸಿದುಕೊಳ್ಳಬೇಡಿ ಎಂದು ಸ್ಥಳೀಯ ನೂರಾರು ನಿವಾಸಿಗಳು, ಮಕ್ಕಳು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮೈದಾನದ ಉಳಿವಿಗಾಗಿ ಒತ್ತಾಯಿಸಿದರು.
2006ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಕೆಂಪೇಗೌಡ ಆಟದ ಮೈದಾನ ಉದ್ಘಾಟಿಸಿದ್ದರು. ಅಂದಿನ ಶಾಸಕ ಎಂ ಶ್ರೀನಿವಾಸ್ ಅವರು ಆಟದ ಮೈದಾನ ಅಭಿವೃದ್ದಿಗಾಗಿ ಹೆಚ್ಚು ಕೆಲಸ ಮಾಡಿದ್ದರು.
Save Kempegowda Play ground at Rajarajeshwari Nagar. #ಮೈದಾನಉಳಿಸಿ #SaveKempeGowdaPlayground #RajarajeshwariNagar #Rrnagar #PMO, #CMKARNATAKA, #MPSuresh, #MLAMunirathana #BBMPCommissioner #bbmpstate #bbmprrnagar@BBMPSWMSplComm @BBMPCOMM @BbmpchdTeam @BSBommai pic.twitter.com/OIzmqsUwve
— Prasad (@Zulu649) November 13, 2022
ಕೆಂಪೇಗೌಡ ಆಟದ ಮೈದಾನದಲ್ಲಿ, ಸರ್ಕಾರಿ ಶಾಲೆ ನಿರ್ಮಿಸಲು ಯೋಜನೆ ರೂಪಿಸಿರುವ ಸಚಿವ ಮುನಿರತ್ನ, ಮಕ್ಕಳಿಗಾಗಿ, ಕ್ರೀಡೆಗಳ ಉಳುವಿಗಾಗಿ ಈ ನಿರ್ಧಾರವನ್ನು ಕೈ ಬಿಡಬೇಕು. ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಆಟದ ಮೈದಾನ ಉಳಿಸಬೇಕು. ಶಾಂತಿಯುತ ಹೋರಾಟಕ್ಕೆ ಸರ್ಕಾರ ಬೆಂಬಲಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಬೆಸ್ಕಾಂ ಗ್ರಾಹಕರ ಗಮನಕ್ಕೆ ; ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದರೆ ಒಪ್ಪಂದ ರದ್ದು
ಈ ಮೈದಾನದಿಂದ 500 ಮೀಟರ್ ದೂರದಲ್ಲಿ ಹಲಗೇವಡೇರಹಳ್ಳಿ ಸರ್ಕಾರಿ ಶಾಲೆಯಿದೆ. ಅಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಬಹುದು. 1 ಕಿ.ಮೀ ವ್ಯಾಪ್ತಿಯಲ್ಲಿ ಬಂಗಾರಪ್ಪನಗರ, 1.5 ಕಿ.ಮೀ ವ್ಯಾಪ್ತಿಯಲ್ಲಿ ಚನ್ನಸಂದ್ರದಲ್ಲಿ ಸರ್ಕಾರಿ ಶಾಲೆ, 1.5 ಕಿ.ಮೀ ವ್ಯಾಪ್ತಿಯಲ್ಲಿ ರಾಜರಾಜೇಶ್ವರಿ ಅನುದಾನಿತ ಶಾಲೆಯಿದೆ. ಅಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗದೇ ಇಲ್ಲಿರುವ ಮೈದಾನದಲ್ಲಿ ಶಾಲೆ ನಿರ್ಮಾಣ ಮಾಡಲು ಚಿಂತಿಸಿರುವುದು ಸರಿಯಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದರು.
#SaveKempeGowdaPlayground #RajarajeshwariNagar #Rrnagar pic.twitter.com/CQuv7XdiVR
— Girish Vijaypura (@GirishVijaypura) November 13, 2022
ಪ್ರತಿಭಟನೆಯ ವೇಳೆ ಸ್ಥಳಕ್ಕೆ ಭೇಟಿ ನೀಡಿದ ರಾಜರಾಜೇಶ್ವರಿನಗರ ವಲಯ ಮುಖ್ಯ ಎಂಜಿನಿಯರ್ ವಿಜಯಕುಮಾರ್, ಉಪ ಆಯುಕ್ತ ಮಲ್ಲಿಕಾರ್ಜುನ್, ನ.15ರಂದು ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆ ನೀಡಿದರು.