14 ವರ್ಷ ವನವಾಸ ಕಳೆದರೂ ಶಾಪ ವಿಮೋಚನೆಯಾಗದ ಸೋಮಸುಂದರ ಪಾಳ್ಯ ರಸ್ತೆ!

  • ದುರಸ್ತಿ ಮಾಡದೇ ಇದ್ದರು ಜನ, ಮತ ಹಾಕುತ್ತಾರೆ
  • 14 ವರ್ಷದಿಂದ ಹದಗೆಟ್ಟಿದ್ದ ರಸ್ತೆ: ಕವಿತಾ ರೆಡ್ಡಿ ಟ್ವೀಟ್

ಬೆಂಗಳೂರಿನ ಸೋಮಸುಂದರ ಪಾಳ್ಯ ಬಡಾವಣೆಯ ಹರ್ನೂರು ಸಂಪರ್ಕ ರಸ್ತೆ ಕಳೆದ 14 ವರ್ಷದಿಂದ ಹದಗೆಟ್ಟಿದ್ದು, ಇದುವರೆಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ರಸ್ತೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ರಸ್ತೆಯ ಅವ್ಯವಸ್ಥೆ ಕುರಿತು ಕಾಂಗ್ರೆಸ್‌ ಮುಖಂಡೆ ಕವಿತಾ ರೆಡ್ಡಿ ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

‘ಎಚ್ ಎಸ್‌ ಆರ್ ಸೋಮಸುಂದರ ಬಡಾವಣೆಯ ಈ ರಸ್ತೆ ಪ್ರಮುಖವಾಗಿ ಹರ್ನೂರು ರಸ್ತೆಗೆ ಸಂಪರ್ಕಿಸುತ್ತದೆ. ಈ ರಸ್ತೆ ಸುಮಾರು 300 ಮೀಟರ್ ಉದ್ದ ಇದ್ದು, ಈ ಭಾಗದಲ್ಲಿ 40 ಸಾವಿರ ಜನ ವಾಸಿಸುತ್ತಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಂಸದರು ಇದುವರೆಗೂ ಈ ರಸ್ತೆಯ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇವರು ದುರಸ್ತಿ ಕಾರ್ಯ ಮಾಡದೇ ಇದ್ದರೂ ಜನ ಇವರಿಗೇ ಮತ ಹಾಕುತ್ತಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

'ನಗರದ ಹೊಂಗಸಂದ್ರ, ಮೈಕೋ ಲೇಔಟ್, ಜಿಬಿ ಪಾಳ್ಯ ರಸ್ತೆ, ಸೇರಿದಂತೆ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದರು. ಚುನಾಯಿತ ಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದ್ದಾರೆ.

ಬೆಳತ್ತೂರಿನ ನಿವಾಸಿಗಳ ಪ್ರತಿಭಟನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆಯಿಂದಾಗುವ ಸಮಸ್ಯೆಗಳನ್ನು ತಡೆಯುವಲ್ಲಿ ವಿಫಲವಾದ ಕಾರಣ ವೈಟ್‌ಫೀಲ್ಡ್ ಬಳಿಯ ಬೆಳತ್ತೂರಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ವಾರ್ಡ್‌ ಮೀಸಲಾತಿಯಿಂದ ದಲಿತ ಸಮುದಾಯಕ್ಕೆ ಅನ್ಯಾಯ; ಕಾಂಗ್ರೆಸ್ ಮುಖಂಡ ನಲ್ಲೂರಳ್ಳಿ ನಾಗೇಶ್ ಆರೋಪ

ರಾಜ್ಯ ರಾಜಧಾನಿಯಲ್ಲಿ ಬಿಟ್ಟುಬಿಡದೇ, ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಮಳೆಯಿಂದಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೇ, ಬಿಬಿಎಂಪಿ ತೆರಿಗೆ ವಸೂಲಿ ಮಾಡುವುದರಲ್ಲಿ ಅರ್ಥವೇನಿದೆ ಎಂದು ಬೆಳತ್ತೂರಿನ ನಿವಾಸಿಗಳು ಪ್ರಶ್ನಿಸಿದ್ದಾರೆ.

ಈಗಾಗಲೇ ನಗರದಲ್ಲೆಡೆ ಜೋರು ಮಳೆ ಸುರಿದ ಕಾರಣ ಸಾಯಿ ಲೇಔಟ್‌, ಪೈ ಲೇಔಟ್‌ ಸೇರಿದಂತೆ ನಾನಾ ಭಾಗಗಳಲ್ಲಿ ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ಬಡಾವಣೆವೊಳಗೆ ನುಗ್ಗಿದ ಕಾರಣ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭಯದಲ್ಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್