- ಬೆಂಗಳೂರಿನಿಂದ ಪಂಪಾಗೆ ₹1,150 ಪ್ರಯಾಣ ದರ ನಿಗದಿ
- ಶಬರಿಮಲೆಗೆ ಹೋಗಲು ಡಿ.1ರಿಂದ ಬಸ್ಗಳ ಸೇವೆ ಆರಂಭ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರಿನಿಂದ ಪಂಪಾಗೆ ತೆರಳುವ ಶಬರಿಮಲೆ ಭಕ್ತರಿಗೆ ಅನುಕೂಲವಾಗಲೆಂದು, ರಾಜ ಹಂಸ ಮತ್ತು ವೊಲ್ವೋ ಬಸ್ಗಳನ್ನು ಬಿಡಲಾಗಿದೆ ಎಂದು ನಿಗಮ ತಿಳಿಸಿದೆ.
ಬೆಂಗಳೂರು -ನಿಲಕ್ಕಲ್ ರಾಜಹಂಸ ಬಸ್ ಬೆಂಗಳೂರಿನಿಂದ ಪ್ರತಿದಿನ ಮಧ್ಯಾಹ್ನ 1.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.15ಕ್ಕೆ ಪಂಪಾ ತಲುಪುತ್ತದೆ. ಅದೇ ದಿನ ಸಂಜೆ 5ಕ್ಕೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12ಕ್ಕೆ ಬೆಂಗಳೂರು ತಲುಪುತ್ತದೆ. ಈ ಬಸ್ಗಳ ಸೇವೆಯನ್ನು ಡಿ.1 ರಿಂದ ಪಡೆಯಬಹುದೆಂದು ನಿಗಮ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ?: ರಸ್ತೆಗುಂಡಿ ಸಾವು-ನೋವು: ಬೆಂಗಳೂರಿನಲ್ಲಿ ಎಎಪಿ ಬೃಹತ್ ಪ್ರತಿಭಟನೆ
ಬೆಂಗಳೂರಿನಿಂದ ಪಂಪಾಗೆ ತೆರಳಲು ₹1,150 ಪ್ರಯಾಣ ದರ ನಿಗದಿ ಪಡಿಸಲಾಗಿದೆ. ಬೆಂಗಳೂರು -ನಿಲಕ್ಕಲ್ ವೋಲ್ವೊ ಬಸ್ ಪ್ರತಿದಿನ ಮಧ್ಯಾಹ್ನ 2ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.15ಕ್ಕೆ ಪಂಪಾ ತಲುಪುತ್ತದೆ.
ಅಂದಿನ ದಿನವೇ ಸಂಜೆ 6ಕ್ಕೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 9.45ಕ್ಕೆ ಬೆಂಗಳೂರು ತಲುಪುತ್ತದೆ. ಈ ಬಸ್ ಪ್ರಯಾಣ ದರ ₹1,490 ನಿಗದಿ ಮಾಡಲಾಗಿದೆ. ಈ ಎರಡೂ ಬಸ್ಗಳ ಸೇವೆಯನ್ನು ಶಾಂತಿನಗರ ಬಸ್ ನಿಲ್ದಾಣದಿಂದ ಪಡೆದುಕೊಳ್ಳಬಹುದು ಎಂದು ಎಂದು ನಿಗಮ ತಿಳಿಸಿದೆ.