'ನಮ್ಮ ಮೆಟ್ರೊ' ನಷ್ಟ ಭರಿಸಲು ರಾಜ್ಯ ಸರ್ಕಾರದಿಂದ ₹124 ಕೋಟಿ ಅನುದಾನ

  • ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಅನುದಾನ ಬಿಡುಗಡೆ
  • ಇನ್ನೂ ₹174 ಕೋಟಿ ನಷ್ಟದ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) 2021ರಲ್ಲಿ ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆಯಿಂದ ಉಂಟಾಗಿರುವ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರ ₹124 ಕೋಟಿ ಅನುದಾನ ಬಿಡುಗಡೆ ಮಾಡಿದೆ.

2010ರಲ್ಲಿ ನಿಯಮ-12ರ ಕೇಂದ್ರ ಸರ್ಕಾರ, ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರದ ನಡುವಿನ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಮೆಟ್ರೋ ರೈಲು ಕಾರ್ಯಾಚರಣೆ ವೇಳೆ ಉಂಟಾಗುವ ನಗದು ನಷ್ಟವನ್ನು ಭರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

Eedina App

ಈ ಹಿನ್ನೆಲೆಯಲ್ಲಿ, 2021ರ ಮಾ.31ರವರೆಗೆ ಬಿಎಂಆರ್‌ಸಿಎಲ್‌ಗೆ ₹ 736.22 ಕೋಟಿ ನಷ್ಟ ಉಂಟಾದಾಗ ರಾಜ್ಯ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ₹611.56 ಕೋಟಿ ನಷ್ಟವನ್ನು ನೀಡಿತ್ತು. ಬಾಕಿ ಉಳಿಸಿಕೊಂಡಿದ್ದ ₹124.66 ಕೋಟಿಯನ್ನು ಈಗ ನೀಡಿದೆ.

2021ರ ಏ.1ರಿಂದ ಡಿ.31ರವರೆಗೆ ಮೆಟ್ರೋ ಕಾರ್ಯಾಚರಣೆಯಿಂದ ಬಿಎಂಆರ್‌ಸಿಎಲ್‌ಗೆ ₹173.48 ಕೋಟಿ ನಷ್ಟವಾಗಿದೆ. ಬಾಕಿ ನಷ್ಟದ ಮೊತ್ತ ಹಾಗೂ 7 ತಿಂಗಳಿನ ನಷ್ಟ ಸೇರಿ ಸರ್ಕಾರ ಒಟ್ಟು ₹298 ಕೋಟಿ ನೀಡಬೇಕಿತ್ತು.

AV Eye Hospital ad

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಈಜಿಪುರ ಮೇಲ್ಸೇತುವೆ ಟೆಂಡರ್ ಕರೆಯುವ ಬಗ್ಗೆ ಬಿಬಿಎಂಪಿ ನಿರ್ಧಾರ ತೆಗೆದುಕೊಳ್ಳಲಿ: ಹೈಕೋರ್ಟ್‌

2022-23ನೇ ಸಾಲಿನ ಅನುದಾನದಲ್ಲಿ ಸರ್ಕಾರ ₹233.8 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಪ್ರಸ್ತಾವನೆ ಸಲ್ಲಿಸಿದ್ದರು.

ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ, ₹124 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನೂ ₹174 ಕೋಟಿ ನಷ್ಟದ ಬಾಕಿಯನ್ನು ಸರ್ಕಾರ ನೀಡಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app