ಪೊಲೀಸರು ಮೊಬೈಲ್ ಕಿತ್ತುಕೊಂಡರೆ ದೂರು ಕೊಡಿ

Kamal Pant
  • ನಗರ ಪೊಲೀಸರಿಗೆ ಆಯುಕ್ತ ಕಮಲ್ ಪಂತ್ ಎಚ್ಚರಿಕೆ
  • ಜನರೇ ಕರೆ ಮಾಡಿ ತಿಳಿಸಲು ಸೂಚನೆ

"ಪೊಲೀಸರು ಯಾವುದೇ ನೆಪದಲ್ಲಿ ಸಾರ್ವಜನಿಕರ ಮೊಬೈಲ್‌ ಫೋನ್‌ ಪಡೆದು ಪರಿಶೀಲನೆ ನಡೆಸುವುದು ಅಪರಾಧ" ಎಂದು ನಗರ ಪೊಲೀಸ್‌ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಕಮಲ್ ಪಂತ್, "ಯಾವುದೇ ಪೊಲೀಸರು ಯಾವುದೇ ನೆಪದಲ್ಲಿ ನಾಗರೀಕರ ಮೊಬೈಲ್ ಫೋನ್ ಅನ್ನು ಪರಿಶೀಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ಯಾವುದೇ ಘಟನೆ ಕಂಡುಬಂದಲ್ಲಿ ದಯವಿಟ್ಟು 112 ಗೆ ಕರೆ ಮಾಡಿ ತಿಳಿಸಿ. ಅಥವಾ 080-22942215 ಗೆ ಕರೆ ಮಾಡಿ ನೇರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿ" ಎಂದು ತಿಳಿಸಿದ್ದಾರೆ.

Eedina App
ನಿಮಗೆ ಏನು ಅನ್ನಿಸ್ತು?
14 ವೋಟ್
eedina app